×
Ad

ಕೃಷಿ ಸಿರಿ ರಾಜ್ಯ ಸಮ್ಮೇಳನದ ಪ್ರಯುಕ್ತ ತಣ್ಣೀರು ಭಾವಿ ಬೀಚ್‌ನಲ್ಲಿ ಮರಳು ಶಿಲ್ಪಕಲಾ ಪ್ರದರ್ಶನ

Update: 2022-03-06 18:26 IST

ಮಂಗಳೂರು, ಮಾ.6: ರಾಜ್ಯ ಕೃಷಿಸಿರಿ ಸಮ್ಮೇಳನದ ಪ್ರಯುಕ್ತ ಭವಿಷ್ಯದ ಬದುಕಿಗಾಗಿ ಮಣ್ಣನ್ನು ಉಳಿಸಿ ಎಂಬ ಚಳುವಳಿಯ ಭಾಗವಾಗಿ ರವಿವಾರ ತಣ್ಣೀರುಬಾವಿ ಬೀಚಿನಲ್ಲಿ ಮರಳಿನಲ್ಲಿ ಶಿಲ್ಪಕಲಾ ಪ್ರದರ್ಶನ ನಡೆಯಿತು.

ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್ ಯಡಪಾಡಿತ್ತಾಯ, ಐಎಂಎ ಮಂಗಳೂರು ಅಧ್ಯಕ್ಷ ಡಾ.ಸತ್ಯಮೂರ್ತಿ ಐತಾಳ್, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಜಂಟಿಯಾಗಿ ಉದ್ಘಾಟಿಸಿ ಮಣ್ಣು ಮತ್ತು ಭೂಮಿ ಈ ಜಗತ್ತಿನ ಎಲ್ಲಾ ರೀತಿಯ ಸಂಪತ್ತುಗಳ ಮೂಲ. ಮಣ್ಣು ಇಲ್ಲದಿದ್ದರೆ ಜಗತ್ತಿನಲ್ಲಿ ಮಾನವ ಸೇರಿದಂತೆ ಜೀವ ಜಗತ್ತು ಇರಲು ಸಾಧ್ಯವಿಲ್ಲ.ಹಾಗಾಗಿ ನಾವೆಲ್ಲರೂ ಮಣ್ಣನ್ನು ಉಳಿಸಲು ಪ್ರಯತ್ನ ಪಡಬೇಕು ಎಂಬ ಕರೆ ಕೊಟ್ಟರು.

ಭವಿಷ್ಯದ ಬದುಕಿನ ಜೀವಾಳ ಆದ ಮಣ್ಣು ಉಳಿಸಿ ಎಂಬ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಪ್ರಾಯೋಜಿಸಿದ ಮರಳು ಶಿಲ್ಪಾಕಲಾ ಚಳುವಳಿಗೆ ಮರಳು ಶಿಲ್ಪಕಲಾವಿದರಾದ ಪ್ರಸಾದ್ ಮೂಲ್ಯ ಸುರತ್ಕಲ್, ರಾಕೇಶ್ ರೈ, ಕಿರಣ್ ಕೈಜೋಡಿಸಿದ್ದರು.

ಕೃಷಿ ಸಿರಿ ರಾಜ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ವಿಜಯ ಶೆಟ್ಟಿ, ಪದಾಧಿಕಾರಿಗಳಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಚಂದ್ರಹಾಸ್ ಕುಂದರ್, ಪ್ರಶಾಂತ್ ಪೈ, ಜಗದೀಶ್ ಪೈ, ದಿನೇಶ್ ಕೊಲ್ನಾಡು, ಸುಧಾಕರ್ ಸಾಲ್ಯಾನ್, ಸಂತೋಷ್ ಕುಮಾರ್ ಕವತ್ತೂರು, ಸಂತೋಷ್ ಪುತ್ರನ್, ಸುಮಿತ್ರಾ ಶೆಟ್ಟಿ, ರೇವತಿ ಕುಂದರ್ ಹಾಗೂ ವಿನಯ ಕೃಷಿ ಬಳಗ, ಪ್ರಣವ ಸೌಹಾರ್ದ ಬ್ಯಾಂಕ್, ಲಯನ್ಸ್ ಕ್ಲಬ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸ್ವಯಂಸೇವಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News