×
Ad

ಉಳ್ಳಾಲ: ಜಾತ್ರೋತ್ಸವಕ್ಕೆ ಚಿಕ್ಕಮ್ಮನ ಮನೆಗೆ ಬಂದಿದ್ದ ಯುವಕ ಆತ್ಮಹತ್ಯೆ

Update: 2022-03-07 15:12 IST

ಉಳ್ಳಾಲ, ಮಾ.7: ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಿಕ್ಕಮ್ಮನ ಮನೆಗೆ ಬಂದಿದ್ದ ಯುವಕನೋರ್ವ  ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ರಕಾಶ್ ನಗರ ಎಂಬಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ.

ಮಂಗಳೂರು ಪಡೀಲು ನಿವಾಸಿ ಸೌರವ್ (21) ಆತ್ಮ ಹತ್ಯೆಗೈದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ಶನಿವಾರ ಮತ್ತು ರವಿವಾರ ಪಂಜಂದಾಯ ದೈವದ ದೊಂಪದ ಬಲಿ ಉತ್ಸವ  ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪಿಲಾರು ಪ್ರಕಾಶ್ ನಗರದ ಸುಜಾತಾ ಎಂಬವರ ಮನೆಗೆ ಪಡೀಲಿನಲ್ಲಿರುವ ಅವರ ಅಕ್ಕ ಮಗ ಸೌರವ್ ಸೇರಿದಂತೆ ಕುಟುಂಬ ಸಮೇತ ರವಿವಾರ ಬೆಳಗ್ಗೆ  ಬಂದಿದ್ದರು. ಬಳಿಕ  ಜಾತ್ರೆಗೆ ತೆರಳಿ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ್ದ ಸೌರವ್ ನಿದ್ದೆ ಬರುತ್ತದೆ ಎಂದು ಹೇಳಿ ಕೋಣೆಗೆ ತೆರಳಿದ್ದಾನೆನ್ನಲಾಗಿದೆ. ಸಂಜೆಯ ವೇಳೆ ತಾಯಿ ಮಗನನ್ನ ಎಬ್ಬಿಸಲು ಹೋದಾಗ ಸೌರವ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಗೈದ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸ್‍ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News