×
Ad

ತುಳು ಅಕಾಡಮಿಯ ಪಾಡ್ದನ ಕಮ್ಮಟದ ಸಮಾರೋಪ

Update: 2022-03-08 20:44 IST

ಮಂಗಳೂರು, ಮಾ.8: ತುಳುನಾಡಿನ ಪ್ರಾಚೀನ-ಪರಂಪರೆಯನ್ನು ಪ್ರಸಾರ-ಪ್ರಚಾರ ನೀಡಿರುವ ಪಾಡ್ದನ ಸಾಹಿತ್ಯ ಮುಂದಿನ ತಲೆಮಾರಿಗೂ ತಲುಪಬೇಕು. ಪಾಡ್ದನ ಸಾಹಿತ್ಯವನ್ನು ಸಂಗ್ರಹಿಸುವ ಮೂಲಕ ಈ ನಾಡಿನ ಭವ್ಯ ಪರಂಪರೆಯನ್ನು ಭವಿಷ್ಯದ ದಿನಗಳಲ್ಲೂ ಬಳಸಲು ಸಾಧ್ಯವಾಗಲಿದೆ ಎಂದು ಮಂಗಳೂರಿನ ಸಂಸ್ಕಾರ ಭಾರತಿಯ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಹೇಳಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ತುಳು ಸಾಹಿತ್ಯ ಅಕಾಡಮಿ, ಸಂಸ್ಕಾರ ಭಾರತಿ ಮಂಗಳೂರು, ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ನ ಜಂಟಿ ಸಂಯೋಜನೆಯಲ್ಲಿ ನಡೆದ ಪಾಡ್ದನ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸ್ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಸಂಸ್ಕಾರ ಭಾರತಿಯ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪಡುಪೆರಾರ ಗ್ರಾಪಂ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.

ಪುರುಷೋತ್ತಮ ಗೋಳಿಪಲ್ಕೆ ಸ್ವಾಗತಿಸಿದರು. ಕಾರ್ತಿಕ್ ಪ್ರಾರ್ಥಿಸಿದರು. ಗೋಪಾಲ ಗೋಳಿಪಲ್ಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News