×
Ad

ಬೆಂಗಳೂರು: ತಮಿಳುನಾಡು ಸಚಿವರ ಪುತ್ರಿಯಿಂದ ಗೃಹ ಸಚಿವರ ಭೇಟಿ; ರಕ್ಷಣೆಗೆ ಮನವಿ

Update: 2022-03-09 23:06 IST

ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದು, ಈ ಸಂಬಂಧ ಸೂಕ್ತ ಭದ್ರತೆ ಒದಗಿಸುವಂತೆ ತಮಿಳುನಾಡಿನ ಮುಜರಾಯಿ ಖಾತೆ ಸಚಿವರ ಪುತ್ರಿ ಜಯಕಲ್ಯಾಣಿ ಹಾಗೂ ಅವರ ಪತಿ ಸತೀಶ್‌ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಸೋಮವಾರ ನಗರ ಪೊಲೀಸ್ ಆಯುಕ್ತರ ಭೇಟಿಯಾದ ನವ ದಂಪತಿ ಇದೀಗ ಗೃಹ ಸಚಿವರನ್ನು ಭೇಟಿಯಾಗಿ ರಕ್ಷಣೆ ಕೋರಿದರು.

ಹಲವು ವರ್ಷಗಳಿಂದ ಸತೀಶ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದೇನೆ. ಆದರೆ, ನಮ್ಮ ಪ್ರೀತಿಗೆ ನನ್ನ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಮಿಳುನಾಡು  ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಆಪ್ತ ಎನ್ನಲಾದ ಮುಜರಾಯಿ ಖಾತೆ ಸಚಿವರ ಪುತ್ರಿ ವೈದ್ಯೆ ಜಯಕಲ್ಯಾಣಿ ಸಚಿವರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News