×
Ad

ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟ; ಶಿಕ್ಷಕಿ ದೀಪಿಕಾ ಶೆಟ್ಟಿಗೆ 5 ಸ್ವರ್ಣ ಪದಕ

Update: 2022-03-11 22:45 IST

ಮಂಗಳೂರು, ಮಾ.11: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸರಕಾರಿ ನೌಕರರ ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಶಾಲೆಯ ಶಿಕ್ಷಕಿ ದೀಪಿಕಾ ಶೆಟ್ಟಿ 100 ಮೀ, 200 ಮೀ. ವೇಗದ ಓಟ, 4/100 ಮೀ. ರಿಲೇ, 4/400 ಮೀ. ರಿಲೇ ಮತ್ತು ಉದ್ದ ಜಿಗಿತದಲ್ಲಿ ಅನುಕ್ರಮವಾಗಿ 5 ಚಿನ್ನದ ಪದಕವನ್ನು ಬಾಚಿಕೊಂಡು ಎಪ್ರಿಲ್ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

2021ರ ರಾಷ್ಟ್ರಮಟ್ಟದ ಪದಕ ವಿಜೇತೆಯೂ ಆಗಿದ್ದ ಇವರು ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣದ ಸುತ್ತ ಓಡಿ ಬೆಳಗಿಸುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News