×
Ad

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 3 ರ‍್ಯಾಂಕ್

Update: 2022-03-12 16:58 IST

ಮಂಗಳೂರು : ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‍ಜೆಇಸಿ) ವಿದ್ಯಾರ್ಥಿಗಳು 2020-21 ರ ಶೈಕ್ಷಣಿಕ ವರ್ಷದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)   ನಡೆಸಿದ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಮೂರು ರ‍್ಯಾಂಕ್ ಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಮತ್ತೊಮ್ಮೆ ಹಿರಿಮೆಯನ್ನು ತಂದಿದ್ದಾರೆ.

ಶೇಕ್ ಮೊಹಮ್ಮದ್ ಜುನೈನ್ ಅವರು ತಮ್ಮ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಅಧ್ಯಯನದಲ್ಲಿ 9.46 ಸಿಜಿಪಿಎ ಗಳಿಸುವ ಮೂಲಕ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ನಾಲ್ಕನೇ ರ್ಯಾಂಕ್ ಅನ್ನು ಪಡೆದ ಗೌರವಕ್ಕೆ ಭಾಜನರಾದರು. ಅವರ ಜೊತೆಯಲ್ಲಿ, ವರುಣ್ ಎಂ ಅವರು 9.35 ಸಿಜಿಪಿಎ ಯೊಂದಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಒಂಬತ್ತನೇ ರ್ಯಾಂಕ್ ಅನ್ನು ಪಡೆದರು. ಸ್ನಾತಕೋತ್ತರ ವಿಭಾಗದಲ್ಲಿ, ಸುಶ್ಮಿತಾ ಅವರು 9.18 ಸಿಜಿಪಿಎ ಗಳಿಸುವ ಮೂಲಕ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಒಅಂ) ನಲ್ಲಿ ಎಂಟನೇ ರ್ಯಾಂಕ್ ಅನ್ನು ಪಡೆದರು.

ಬೆಳಗಾವಿಯಲ್ಲಿ ನಡೆದ ವಿಟಿಯುನ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯಪಾಲರು ಮತ್ತು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪದವಿಗಳನ್ನು ಪ್ರದಾನ ಮಾಡಲಾಯಿತು. 

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ತನ್ನ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡಿದ ಬಗ್ಗೆ ಹೆಮ್ಮೆಪಡುತ್ತದೆ. ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅದರ ಎಲ್ಲಾ ರ್ಯಾಂಕ್ ವಿಜೇತರು ಮತ್ತು ಇತರ ಪದವೀಧರ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾ ಅವರಿಗೆ ಶುಭ ಹಾರೈಸುತ್ತಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News