ಫೆಡರೇಶನ್ ಆಫ್ ಮಸಾಜಿದ್, ಮದಾರಿಸ್ ಅಧ್ಯಕ್ಷರಾಗಿ ಝಿಯಾವುಲ್ಲಾ ಖಾನ್ ಪುನರ್ ಆಯ್ಕೆ
ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಫೆಡರೇಶನ್ ಆಫ್ ಮಸಾಜಿದ್, ಮದಾರಿಸ್ ಹಾಗೂ ಇತರ ವಕ್ಫ್ ಸಂಸ್ಥೆಗಳ ಅಧ್ಯಕ್ಷರಾಗಿ ಝಿಯಾವುಲ್ಲಾ ಖಾನ್ ಪುನರ್ ಆಯ್ಕೆಯಾಗಿದ್ದು, ಫೆಡರೇಶನ್‍ಗೆ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಶನಿವಾರ ಇಂದಿರಾನಗರದ ಮಸ್ಜಿದೆ ಉಮ್ಮುಲ್ ಹಸ್ನೈನ್‍ನಲ್ಲಿ ನಡೆದ ಫೆಡರೇಶನ್‍ನ ಸರ್ವಸದಸ್ಯರ ಸಭೆಯಲ್ಲಿ ಝಿಯಾವುಲ್ಲಾ ಖಾನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಉಪಾಧ್ಯಕ್ಷರಾಗಿ ಎ.ಕೆ.ಅಬ್ದುಲ್ ಬಶೀರ್(ಅಧ್ಯಕ್ಷರು, ಫಾರೂಖಿಯಾ ಮಸ್ಜಿದ್, ಕೋಡಿಹಳ್ಳಿ), ಅಸ್ಗರ್ ಪಾಷ(ಕಾರ್ಯದರ್ಶಿ, ಜಾಮಿಯಾ ಮಸ್ಜಿದ್, ಇಸ್ಲಾಂಪುರ) ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಮುಹಮ್ಮದ್ ತಬ್ರೇಝ್ ಪಾಷ(ಪ್ರತಿನಿಧಿ, ಮದೀನಾ ಮಸ್ಜಿದ್, ಕೆ.ಆರ್.ಪುರ), ಜಂಟಿ ಕಾರ್ಯದರ್ಶಿಯಾಗಿ ಅಮ್ಜದ್ ಖಾನ್ ಎಂ.(ಪ್ರಧಾನ ಕಾರ್ಯದರ್ಶಿ, ಮಕ್ಕಾ ಮಸ್ಜಿದ್ ಟ್ರಸ್ಟ್, ಕೌದೇನಹಳ್ಳಿ) ಹಾಗೂ ಖಜಾಂಚಿಯಾಗಿ ಮುಹಮ್ಮದ್ ಇಸ್ಮಾಯಿಲ್(ಇಂದಿರಾನಗರ) ಇವರನ್ನು ಆಯ್ಕೆ ಮಾಡಲಾಯಿತು.
ನಾಸೀಹ್ ಫೌಂಡೇಶನ್ ಅಧ್ಯಕ್ಷ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ಮಸ್ಜಿದೆ ನೂರ್ ಹಾಗೂ ಮುಸ್ಲಿಂ ಅನಾಥಾಶ್ರಮದ ಕಾರ್ಯದರ್ಶಿ ಇಬ್ರಾಹೀಂ ಶಫೀಕ್ ಅವರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.