×
Ad

ಮಾ.14: ದೇರಳಕಟ್ಟೆಯಲ್ಲಿ ʼರೆಡ್ ಕ್ಲಬ್ʼ ಶುಭಾರಂಭ

Update: 2022-03-13 22:05 IST

ಮಂಗಳೂರು : ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಎನ್‌ಎಂ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾದ ʼರೆಡ್ ಕ್ಲಬ್ʼ ಬಟ್ಟೆಬರೆ ಮಳಿಗೆಯು ಮಾ.14ರಂದು ಸಂಜೆ 5ಕ್ಕೆ ಶುಭಾರಂಭಗೊಳ್ಳಲಿದೆ.

ಸಯ್ಯದ್ ಕೆ.ಎಸ್. ಅಲಿ ತಂಙಳ್ ಕುಂಬೋಲ್ ದುಆಗೈಯಲಿದ್ದು, ಅತಿಥಿಗಳಾಗಿ ರಾಜ್ಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಮತ್ತಿತರರು ಭಾಗವಹಿಸಲಿದ್ದಾರೆ.

ವಿಶೇಷ ಕೊಡುಗೆ: ವರರಿಗೆ ಸಂಬಂಧಿಸಿದಂತೆ ಪ್ಯಾಂಟ್, ಶರ್ಟ್, ಸೂಟ್, ಕುರ್ತಾ, ಶೇರ್ವಾಣಿ ಸಹಿತ ಎಲ್ಲಾ ರೀತಿಯ ಉಡುಪುಗಳು ಮಿತದರದಲ್ಲಿ ಲಭ್ಯವಿದೆ. ಉದ್ಘಾಟನೆಯ ಪ್ರಯುಕ್ತ ಮಾ.14ರಂದು ವಿಶೇಷ ರಿಯಾಯಿತಿಯನ್ನು ಪ್ರಕಟಿಸಲಾಗಿದೆ. ಅಂದರೆ 1 ಸಾವಿರ ರೂ.ಗೆ ಪುರುಷರ ಪ್ಯಾಂಟ್ ಮತ್ತು ಶರ್ಟ್ ಪೀಸ್ ಖರೀದಿಸಬಹುದಲ್ಲದೆ ಅವುಗಳನ್ನು ಉಚಿತವಾಗಿ ಹೊಲಿದು ಕೊಡಲಾಗುತ್ತದೆ. ಅದಲ್ಲದೆ 1 ಸಾವಿರ ರೂ. ಪಾವತಿಸಿದರೆ ಕುರ್ತಾ ಸೆಟ್‌ನ್ನು ಕೂಡ ಹೊಲಿದು ಕೊಡಲಾಗುತ್ತದೆ. ಒಬ್ಬ ಗ್ರಾಹಕರಿಗೆ ಕೇವಲ ಎರಡು ಸೆಟ್ ಉಡುಪುಗಳನ್ನು ಮಾತ್ರ ಖರೀದಿಸಲು ಅವಕಾಶವಿರುತ್ತದೆ. ಮದುವೆಗೆ ಸಂಬಂಧಿಸಿದ ಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News