×
Ad

ಹಿಜಾಬ್ ತೀರ್ಪು ಹಿನ್ನೆಲೆ; ಪಾದಯಾತ್ರೆ ಮುಂದೂಡಿಕೆ : ಎಸ್‌ಡಿಪಿಐ

Update: 2022-03-14 23:28 IST

ಮಂಗಳೂರು: ಬೆಳ್ತಂಗಡಿಯ ಸಂಘಪರಿವಾರದ ನಾಯಕನಿಂದ ಹತ್ಯೆಗೀಡಾದ ದಿನೇಶ್ ಕನ್ಯಾಡಿ ಕುಟುಂಬದ ನ್ಯಾಯಕ್ಕಾಗಿ ಮತ್ತು ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಪಕ್ಷದ ವತಿಯಿಂದ ಮಾರ್ಚ್ 15,16,17 ರಂದು ಬೆಳ್ತಂಗಡಿಯಿಂದ ಮಂಗಳೂರಿಗೆ ಬೃಹತ್‌ ಪಾದಯಾತ್ರೆ ಹಮ್ಮಿಕೊಂಡಿದ್ದು, ಹಿಜಾಬ್ ತೀರ್ಪು ಪ್ರಕಟದ ಭಾಗವಾಗಿ ಜಿಲ್ಲಾಧಿಕಾರಿಯಿಂದ 144 ಸೆಕ್ಷನ್ ವಿಧಿಸಿರುವ ಕಾರಣ ಕಾನೂನು ಸುವ್ಯವಸ್ಥೆಯ ಬಗ್ಗೆ ಗೌರವ ನೀಡಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಎಸ್ ಡಿಪಿಐ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News