×
Ad

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ

Update: 2022-03-15 20:16 IST

ಉಡುಪಿ : ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ, ಗಂಗಾ ಕಲ್ಯಾಣ ಯೋಜನೆ ಸಾಲ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  

ಪರಿಶಿಷ್ಟ ಜಾತಿಯ ಅರುಂಧತಿಯಾರ್, ಭಂಗಿ, ಮೆಹತರ್, ಓಲ್ಗಾನ, ರೂಖಿ, ಮಲ್ಕಾನ, ಹಲಾಲ್‌ಕೋರ್, ಲಾಲ್‌ಬೇಗಿ, ಬಾಲ್ಮಿಕಿ, ಕೊರರ್, ಜಾಡ್‌ಮಾಲಿ ಬಾಂಬಿ, ಭಾಂಭಿ, ಅಸಾದರು, ಅಸೋಡಿ, ಚಮ್ಮಡಿಯ, ಚಮ್ಮಾರ್, ಚಂಭಾರ್, ಚಮಗಾರ್, ಹರಳಯ್ಯ, ಹರಲಿ, ಖಲ್ಪ, ಮಚ್‌ಗಾರ್, ಮೋಚಿಗಾರ್, ಮಾದರ್, ಮಾದಿಗ್, ಮೋಚಿ, ಮೂಚಿ, ತೆಲುಗುಮೋಚಿ, ಕಾಮಟಿಮೋಚಿ, ರಾಣಿಗರ್, ರೋಹಿದಾಸ್, ರೋಹಿತ್, ಸಮಗಾರ್,  ಬಿಂಡ್ಲಾ,  ಚಕ್ಕಿಲಿಯನ್, ದಕ್ಕಲ್ ದೊಕ್ಕಲ್‌ವಾರ್, ದಕ್ಕಲಿಗ, ಡೋರ್, ಕಕ್ಕಯ್ಯ, ಕನ್‌ಕಯ್ಯ  ಜಾಂಬುವುಲ,  ಮಾಚಾಲ,  ಮಾದಿಗ, ಮಾಂಗ್, ಮಾತಂಗ್, ಮಿನಿ ಮಾದಿಗ್, ಮಾಂಗ್‌ಗಾರುಡಿ, ಮಾಂಗ್‌ಗಾರೋಡಿ, ಮಾಷ್ಟಿ, ಸಮಗಾರ ಸಿಂದೊಲ್ಲು, ಚಿಂದೊಲ್ಲು ಇತ್ಯಾದಿ ಉಪಜಾತಿಗೆ ಸೇರಿರುವ, ಕನಿಷ್ಟ ೧.೦೦ ಎಕರೆ ಜಮೀನು ಹೊಂದಿರುವ ಸಣ್ಣ ರೈತರು ಈ ಯೋಜನೆಯಡಿ ಮಾ.೨೮ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ರಜತಾದ್ರಿ ಮಣಿಪಾಲ, ದೂರವಾಣಿ ಸಂಖ್ಯೆ: ೦೮೨೦-೨೫೭೪೮೮೪ ಅನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News