ಏಕದಿನ ಪಂದ್ಯಗಳಲ್ಲಿ 250 ವಿಕೆಟ್: ಜೂಲನ್ ಗೋಸ್ವಾಮಿ ದಾಖಲೆ

Update: 2022-03-17 03:06 GMT

ಮಹಿಳೆಯರ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ 250 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆಗಿ ಹಿರಿಯ ಭಾರತೀಯ ವೇಗಿ ಜೂಲನ್ ಗೋಸ್ವಾಮಿ ಬುಧವಾರ ಇತಿಹಾಸ ಸೃಷ್ಟಿಸಿದ್ದಾರೆ.

ನ್ಯೂಝಿಲ್ಯಾಂಡ್‌ನ ವೌಂಟ್ ಮಾಂಗನುಯಿಯ ಬೇ ಓವಲ್‌ನಲ್ಲಿ ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಅವರು ಈ ದಾಖಲೆಯನ್ನು ನಿರ್ಮಿಸಿದರು. ಇಂಗ್ಲೆಂಡ್‌ನ ಟಾಮಿ ಬೋಮೊಂತ್ ಜೂಲನ್‌ರ 250ನೇ ಬಲಿಯಾದರು.

ಜೂಲನ್ ಈಗಾಗಲೇ ಮಹಿಳೆಯರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಗಳಿಕೆದಾರರಾಗಿದ್ದಾರೆ. ಆಸ್ಟ್ರೇಲಿಯದ ಮಾಜಿ ಕ್ರಿಕೆಟರ್ ಕ್ಯಾತರೀನ್ ಫಿಝ್‌ಪ್ಯಾಟ್ರಿಕ್ 180 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News