×
Ad

​ಹಿದಾಯತ್ ನಗರ: ಸ್ವಲಾತ್ ವಾರ್ಷಿಕೋತ್ಸವ

Update: 2022-03-17 16:43 IST

ಉಳ್ಳಾಲ : ಅಲ್ ಹಿದಾಯ ಜುಮ್ಮಾ ಮಸೀದಿ ಹಿದಾಯತ್ ನಗರ ಇದರ ಆಶ್ರಯದಲ್ಲಿ 22 ನೇ ಸ್ವಲಾತ್ ವಾರ್ಷಿಕೋತ್ಸವ ಉಡುಪಿ ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ರವರ ನೇತೃತ್ವದಲ್ಲಿ ಬುಧವಾರ ನಡೆಯಿತು.

ಹಿದಾಯ ಜುಮ್ಮಾ ಮಸೀದಿ ಖತೀಬ್ ಮುಹಮ್ಮದ್ ಹನೀಫ್ ಸಖಾಫಿ ಉದ್ಘಾಟಿಸಿ ದರು. ಹುಸೈನ್ ಸಅದಿ ಕೆಸಿರೋಡ್ ಧಾರ್ಮಿಕ ಉಪನ್ಯಾಸ ನೀಡಿದರು.

ಅಲ್ ಹಿದಾಯ ಜುಮ್ಮಾ ಮಸೀದಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಹಿದಾಯತ್ ನಗರ ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ಖಾದರ್, ಮುಹಧ್ಸಿನ್  ಹನೀಫ್ ಸಖಾಫಿ , ಸದರ್ ಮುಅಲ್ಲಿಂ ಹಸನ್ ಮದನಿ, ಎಸ್ ಎಂಎ ತಲಪಾಡಿ ರೇಂಜ್ ಅಧ್ಯಕ್ಷ ಕೆ.ಎಂ.ಅಬ್ಬಾಸ್ ಕೊಳಂಗರೆ ಎಸ್ ವೈ ಎಸ್ ಕೆಸಿರೋಡ್ ಸೆಂಟರ್ ಅಧ್ಯಕ್ಷ ಎ.ಎಂ.ಅಬ್ಬಾಸ್ ಹಾಜಿ ಕೊಮರಂಗಳ , ತಲಪಾಡಿ ಮಸೀದಿ ಅಧ್ಯಕ್ಷ ಯಾಕೂಬ್ ಪೂಮಣ್ಣು . ಹಸನ್ ಜಾಬಿರ್ ಫಾಳಿಲಿ ತಲಪಾಡಿ,ಮುಸ್ತಫಾ ಝುಹ್ರಿ, ಕೊಮರಂಗಳ  ಬಾವಾ ಹಾಜಿ ಪಿಲಿಕೂರು
ಯುಬಿಎಮ್  ಮಹಮ್ಮದ್ ಹಾಜಿ, ಸಾಮಾಜಿಕ ಕಾರ್ಯಕರ್ತ ಬಶೀರ್ ಅಜ್ಜಿನಡ್ಕ  ಮತ್ತಿತರರು ಉಪಸ್ಥಿತರಿದ್ದರು.

ಉಮ್ಮರ್ ಮಾಸ್ಟರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜಾಬೀರ್ ಹುಸೈನ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News