ಮೇಟಿ ಮುದಿಯಪ್ಪ

Update: 2022-03-18 13:34 GMT

ಉಡುಪಿ : ಬಹುಮುಖ ಪ್ರತಿಭೆಯ ನಿವೃತ್ತ ಪ್ರಾಂಶುಪಾಲ,  ಉಡುಪಿಯ ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅವಿಭಾಜ್ಯ ಅಂಗದಂತಿದ್ದ ಮೇಟಿ ಮುದಿಯಪ್ಪ (66) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ನಿಧನರಾದರು.

ಉಡುಪಿಯ ಹಲವಾರು ಸಾಂಸ್ಕೃತಿಕ, ಸಾಮಾಜಿಕ ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮೇಟಿ ಮುದಿಯಪ್ಪ ಒಳ್ಳೆಯ ಶಿಕ್ಷಕ, ರಂಗನಟ, ಪರಿಸರ ಪ್ರೇಮಿ, ಒಳ್ಳೆಯ ಸಂಘಟಕ, ಸಾಹಿತಿ, ಕವಿ ಎಲ್ಲವೂ ಆಗಿದ್ದರು. ಒಂದು ಅವಧಿಗೆ ಅವರು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. 

ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವಾ ನಿವೃತ್ತಿ ಹೊಂದಿದ್ದ ಇವರು ಉಡುಪಿ ರಂಗಭೂಮಿಯ ಜತೆ ಕಾರ್ಯದರ್ಶಿ ಯಾಗಿ, ಯಕ್ಷಗಾನ ಕಲಾರಂಗ, ರಥಬೀದಿ ಗೆಳೆಯರು, ಲಯನ್ಸ್ ಸೇರಿದಂತೆ ಹಲವು ಸಂಘಸಂಸ್ಥೆಗಳ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಹಲವಾರು ಕವನ ಸಂಕಲನಗಳು ಪ್ರಕಟಗೊಂಡಿವೆ.

ಹೈದರಾಬಾದ್ ಕರ್ನಾಟಕದಿಂದ ಬಂದು ಉಡುಪಿಯಲ್ಲೇ ನೆಲೆಸಿದ್ದ ಮೇಟಿ ಮುದಿಯಪ್ಪ, ತಮ್ಮೂರಿನ ಹತ್ತಾರು ಬಡ ಮಕ್ಕಳನ್ನು ಉಡುಪಿಗೆ ಕರೆತಂದು ಅವರಿಗೆ ತಾವೇ ವಿದ್ಯಾಭ್ಯಾಸ ಕೊಡಿಸಿ ಅವರ ಭವಿಷ್ಯ ರೂಪಿಸಿದ್ದರು. ೩೫ ವರ್ಷಗಳಿಗೂ ಅಧಿಕಕಾಲ ಶಿಕ್ಷಕರಾಗಿ ದುಡಿದು ಸಾವಿರಾರು ಶಿಷ್ಯರ ಮೆಚ್ಚಿನ ಗುರುಗಳಾಗಿದ್ದರು.

ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಶಿಷ್ಯ ವರ್ಗವನ್ನು ಅಗಲಿರುವ ಮೇಟಿ ಮುದಿಯಪ್ಪ ಅವರ ನಿಧನಕ್ಕೆ ಉಡುಪಿಯ ವಿವಿಧ ಕಲಾ, ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ