×
Ad

ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಾಯಿ ಪಾಪಮ್ಮ ನಿಧನ

Update: 2022-03-19 18:25 IST

ಬೆಂಗಳೂರು, ಮಾ. 19: ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರ ತಾಯಿ ಪಾಪಮ್ಮ(78) ಅವರ ಶುಕ್ರವಾರ ರಾತ್ರಿ 10:45ರ ಸುಮಾರಿಗೆ ನಿಧನರಾಗಿದ್ದಾರೆ.

ಪಾಪಮ್ಮ ಅವರು ಮಾವಳ್ಳಿ ಶಂಕರ್ ಸೇರಿದಂತೆ ಐದು ಮಂದಿ ಗಂಡು ಮತ್ತು ಓರ್ವ ಹೆಣ್ಣು ಮಗಳು ಸೇರಿದಂತೆ ಆರು ಮಂದಿ ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು-ಮಿತ್ರರು ಹಾಗೂ ಅಪಾರ ಸಂಖ್ಯೆಯ ದಲಿತ ಚಳವಳಿಯ ಕಾರ್ಯಕರ್ತರನ್ನು ಅಗಲಿದ್ದಾರೆ.

ಮಾವಳ್ಳಿಯಲ್ಲಿನ ಮಾವಳ್ಳಿ ಶಂಕರ್ ಅವರ ನಿವಾಸದಲ್ಲಿ ಪಾಪ್ಪಮ್ಮ ಅವರ ಪಾರ್ಥಿವ ಶರೀರವನ್ನು ದಲಿತ ಚಳವಳಿಯ ಕಾರ್ಯಕರ್ತರು ಹಾಗೂ ಬಂಧು-ಮಿತ್ರರರ ಅಂತಿಮ ದರ್ಶನಕ್ಕಾಗಿ ಕೆಲಕಾಲ ಇರಿಸಲಾಗಿತ್ತು. ಆ ಬಳಿಕ ಇಲ್ಲಿನ ಡಬಲ್ ರಸ್ತೆಯಲ್ಲಿನ ಸ್ಮಶಾನದಲ್ಲಿ ಮೃತರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News