ಸುಳ್ಯ : ಶತಾಯುಷಿ ನಾಟಿ ವೈದ್ಯ ಅಬ್ಬುಮುಕ್ರಿಕ ನಿಧನ
Update: 2022-03-19 22:34 IST
ಸುಳ್ಯ : ಕಳಂಜ ಗ್ರಾಮದ ನಾಟಿವೈದ್ಯ, ಶತಾಯುಷಿ ಅಬ್ಬು ಮುಕ್ರಿಕ (112) ಸ್ವಗೃಹದಲ್ಲಿ ಶನಿವಾರ ನಿಧನರಾದರು.
ಮೃತರು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಸುಮಾರು 50 ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಆರು ಮಂದಿ ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.