×
Ad

ವೈವಿಧ್ಯತೆಯನ್ನು ಅಂಗೀಕರಿಸುವಲ್ಲಿ ಸಮವಸ್ತ್ರಗಳ ವ್ಯತ್ಯಾಸ ಅಂಗೀಕರಿಸಲು ಸಾಧ್ಯವಾಗಬೇಕು: ಡಾ.ಅಬ್ದುಲ್ ಹಕೀಂ ಅಝ್ಹರಿ

Update: 2022-03-20 23:08 IST

ಮಂಗಳೂರು: ಭಾರತದಂತಹ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿರುವ ವಿದ್ಯಾಭ್ಯಾಸ ಕೇಂದ್ರಗಳಲ್ಲಿ ಸಮವಸ್ತ್ರಗಳ ವೈವಿಧ್ಯತೆಯನ್ನು ಅಂಗೀಕರಿಸಲು ಸಾಧ್ಯವಾಗಬೇಕೆಂದು ಮರ್ಕಝ್ ನಾಲೆಡ್ಜ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ಹೇಳಿದರು.‌

ಸಮವಸ್ತ್ರದ ವಿಷಯದಲ್ಲಿ ಆಡಳಿತ ಅಧಿಕಾರ ತೋರುತ್ತಿರುವ ಕಠಿಣ ಕ್ರಮವು ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸುತ್ತದೆ ಎಂದು ಯೆನೆಪೋಯ ವಿದ್ಯಾಸಂಸ್ಥೆಯಲ್ಲಿ ತನ್ನ ʼಅನುಕರಣೆಯ ಆನಂದʼ ಎಂಬ ಪುಸ್ತಕದ ಕನ್ನಡ ಅನುವಾದ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಯೆನೆಪೋಯ ವಿದ್ಯಾಸಂಸ್ಥೆಯ ಪ್ರೊ. ಕುಲಪತಿ ಮುಹಮ್ಮದ್ ಫರ್ಹಾದ್ ಯೆನೆಪೋಯ ಅಧ್ಯಕ್ಷತೆ ವಹಿಸಿದ್ದರು.

ಎಸ್ ಎಂ ರಶೀದ್ ಹಾಜಿ, ಮುಮ್ತಾಝ್‌  ಅಲಿ, ಹಮೀದ್ ಹಾಜಿ ಕರಿವಲಿ, ಶೈಖ್ ಬಾವ ಹಾಜಿ, ಶಾಕಿರ್ ಹಾಜಿ ಹಾಗು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ರೋಷನ್ ನೂರಾನಿ ಸ್ವಾಗತಿಸಿ, ಅಬೂ ಸ್ವಾಲಿಹ್ ಸಖಾಫಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News