ಸಂಘಪರಿವಾರದ ಶಕ್ತಿಗಳಿಂದ ದೇಶದ ಸೌಹಾರ್ದಕ್ಕೆ ಧಕ್ಕೆ: ಬೃಂದಾ ಕಾರಟ್

Update: 2022-03-21 09:22 GMT

ಮಂಗಳೂರು, ಮಾ.21;ಸಂಘ ಪರಿವಾರದ ಶಕ್ತಿ ಗಳಿಂದ ದೇಶದ ಸೌಹಾರ್ದಕ್ಕೆ  ಧಕ್ಕೆ ತರುತ್ತಿದೆ. ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯೆ, ಮಾಜಿ ಸಂಸದೆ ಬೃಂದಾ ಕಾರಟ್ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಗಳ ನಂಬಿಕೆ ಹಾಗೂ ಹಕ್ಕುಗಳ ಮೇಲಿನ ನಿರಂತರ ದಾಳಿಯ ವಿರುದ್ಧ ನಗರದ ಪುರಭವನದಲ್ಲಿಂದು ಸಿಪಿಐ (ಎಂ) ಸೌಹಾರ್ದ ಸಮಾವೇಶದಲ್ಲಿ ಮಾತನಾಡುತ್ತಿದ್ದರು. 

'ಹಲವು ಸವಾಲು ಗಳ ನಡುವೆ ಡಾ.ಬಾಬಾ ಸಾಹೇಬರ ನೇತೃತ್ವದ ದೇಶದ ‌ಸಂವಿಧಾನ ಈ ದೇಶದ ವಿಭಿನ್ನ ಸಂಸ್ಕೃತಿ, ಜನ ಸಮುದಾಯ ವನ್ನು ಒಂದುಗೂಡಿಸಿದೆ.ಈ ದೇಶದ ಸಂವಿಧಾನ ಜಾರಿಯಾದಾಗ ಅದು ಭಾರ ತೀಯ ವಾಗಿಲ್ಲಾ,ಮನುಸ್ಮೃತಿ ಯ ಆಧಾರದಲ್ಲಿ ರಚನೆಯಾಗಿಲ್ಲ ಎಂದು ತಮ್ಮ ಮುಖವಾಣಿಯ ಮೂಲಕ ವಿರೋಧಿಸಿದ ಸಂಘ ಪರಿವಾರ ಇಂದು ಅಧಿಕಾರ ಪಡೆದುಕೊಂಡು ಸಂವಿಧಾನದ  ಮೇಲೆ ನಿರಂತರ ದಾಳಿ ನಡೆಸುತ್ತಿದೆ. ದೇಶದ ಬಹು ಸಂಸ್ಕೃತಿ  (ಬುಲ್ಡೋಜರ್ಸ್ ಮಾದರಿಯ ಮೂಲಕ) ಯನ್ನು ನೆಲಸಮ ಮಾಡಿ ಏಕ ಸಂಸೃತಿಯನ್ನು ಹೇರಲು ಹೊರಟಿದೆ. ಕರ್ನಾಟಕದ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ದ ಮೇಲೆ ಪ್ರಜಾಪ್ರಭುತ್ವ ದ ಮೇಲೆ ನಡೆಯುತ್ತಿರುವ ದಾಳಿಯ ಒಂದು ಉದಾಹರಣೆ. ಮತಾಂತರ ನಿಷೇಧ ಕಾಯಿದೆ ಸಂವಿಧಾನ ನೀಡಿರುವ ಹಕ್ಕು ನ್ನು ನಿರಾಕರಿಸುವ ಅತ್ಯಂತ ಕೆಟ್ಟ ಶಾಸನ ಇದು ಬಲವಂತದ ಮರುಮತಾಂತರವನ್ನು ಕಾನೂನಿನ ಮೂಲಕ ತಂದಿದೆ' ಎಂದು ಬೃಂದಾ ಕಾರಟ್ ತಿಳಿಸಿದ್ದಾರೆ.

'ಕರ್ನಾಟಕದ ಹಿಜಾಬ್ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿ ರುವ ತೀರ್ಪು ದುರಾದೃಷ್ಟ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯ ನೀಡಬಹುದು ಎನ್ನುವ  ವಿಶ್ವಾಸವಿದೆ. ಈ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾ ಗುತ್ತಿದೆ.  ಪಂಜಾಬ್ ನಲ್ಲಿ ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ  ಶಿರವಸ್ತ್ರ ಧರಿಸಲು ಅವಕಾಶ ವಿದೆ .ಭಾರತದ ಸಂವಿಧಾನದ ಲ್ಲಿ ಶಿಕ್ಷಣ ಪಡೆಯುವ ಹಕ್ಕು ಎಲ್ಲರಿಗೂ ಇದೆ ಅದನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ಯಾಗಿದೆ ' ಎಂದು ಬೃಂದಾ ಕಾರಟ್ ತಿಳಿಸಿದ್ದಾರೆ.

'ಸ್ವಾತಂತ್ರ್ಯ ದ ಹೋರಾಟಕ್ಕೆ ಕೊಡುಗೆ ನೀಡದೆ ಇರುವ ಸಂಘ ಪರಿವಾರ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ದ ಆಚರಣೆಯ ಸಂದರ್ಭದಲ್ಲಿ ಜನರನ್ನು ಒಡೆದು ಆಳುವ ನೀತಿ ಯನ್ನು ಸರಿಸುತ್ತಿದೆ.ಸ್ವಾತಂತ್ರ್ಯ ಹೋರಾಟವನ್ನು ಹೈಜಾಕ್ ಮಾಡಲು ಹೊರಟಿದೆ' ಎಂದು ಬೃಂದಾ ಕಾರಟ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಸಿಪಿಐಎಂ ದ.ಕ ಜಿಲ್ಲಾ ಕಾರ್ಯದರ್ಶಿ ‌ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು, ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ರಾದ ಯಾದವ ಶೆಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ರಾದ ಕೆ.ನೀಲಾ,ಯಮುನಾ ಗಾಂವ್ಕರ್, ವಸಂತ ಆಚಾರಿ,ಮುನೀರ್ ಕಾಟಿಪಳ್ಳ, ಬಾಲಕೃಷ್ಣ ಶೆಟ್ಟಿ,ಡಾ.ಕೆ.ಪ್ರಕಾಶ್, ಗುರುಶಾಂತ್, ಮಹಾಂತೇಶ ಹಾಗೂ ಸಿಪಿಐಎಂ ಮುಖಂಡರಾದ ಡಾ.ಕೃಷ್ಣ ಪ್ಪ ಕೊಂಚಾಡಿ, ಸುಕುಮಾರ್, ಪದ್ಮಾವತಿ, ಜಯಂತಿ ಶೆಟ್ಟಿ,ರಮಣಿ,ವಸಂತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News