×
Ad

ಮಲಾರ್ ಅರಸ್ತಾನ ಮಖಾಂ ಉರೂಸ್ ಸಮಾರೋಪ

Update: 2022-03-21 18:04 IST

ಮಂಗಳೂರು : ಪಾವೂರು ಗ್ರಾಮದ ಅಲ್-ಮುಬಾರಕ್ ಜುಮಾ ಮಸ್ಜಿದ್ ಹಾಗೂ ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ) ಅರಸ್ತಾನ ಮಲಾರ್ ಇದರ ೪೬ನೇ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಯಿ ರಾತೀಬ್, ಮಜ್ಲಿಸುನ್ನೂರು ಆಧ್ಯಾತ್ಮಿಕ ಮಜ್ಲಿಸ್, ಧಾರ್ಮಿಕ ಉಪನ್ಯಾಸ ಮತ್ತು ದರ್ಗಾ ಶರೀಫ್ ಉರೂಸ್ ಸಮಾರೋಪವು ರವಿವಾರ ಮಸೀದಿಯ ವಠಾರದಲ್ಲಿ ನಡೆಯಿತು.

ಜಮಾಅತ್ ಅಧ್ಯಕ್ಷ  ಹಾಮದ್ ಅಲ್ತಾಫ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ಮಲಪ್ಪುರಂ ದುಆಗೈದರು. ಅಶ್ಛಾಖ್ ಫೈಝಿ ನಂದಾವರ ಮತಪ್ರವಚನ ನೀಡಿದರುಇ. ಅತಿಥಿಗಳಾಗಿ ಅರಸ್ತಾನ ಜಮಾಅತ್‌ನ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು ಮತ್ತು ಹಂಝ ಮಲಾರ್, ಜಮಾಅತ್‌ನ ಉಪಾಧ್ಯಕ್ಷ ನಾಸಿರ್ ಟಿ., ಪಾವೂರು ಗ್ರಾಪಂ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಗ್ರಾಪಂ ಸದಸ್ಯ ರಿಝ್ವಾನ್ ಟಿ. ಭಾಗವಹಿಸಿದ್ದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಶಮೀರ್ ಟಿಪ್ಪುನಗರ ಸ್ವಾಗತಿಸಿದರು. ಎಂ.ಕೆ.ರಹೀಂ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News