×
Ad

ಮಂಗಳೂರು ವಿಮಾನ ನಿಲ್ದಾಣಕ್ಕೆ ʼಎಸಿಐʼನಿಂದ ಮಾನ್ಯತಾ ಪ್ರಮಾಣ ಪತ್ರ

Update: 2022-03-23 17:19 IST

ಮಂಗಳೂರು: ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ಎಸಿಐ), ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾನ್ಯತೆಯ ಪ್ರಮಾಣಪತ್ರವನ್ನು ನೀಡಿದೆ.

ನಿರಂತರ ಗ್ರಾಹಕರ ಅನುಭವ ಸುಧಾರಣೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬದ್ಧತೆಯನ್ನು ಪ್ರಮಾಣಪತ್ರವು ಗುರುತಿಸಿದ್ದು, ಮಾರ್ಚ್ 16ರಂದು  ನೀಡಲಾದ ಈ ಪ್ರಮಾಣಪತ್ರವು ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ.

ಮಾನ್ಯತೆ ಕಾರ್ಯಕ್ರಮವು ಗ್ರಾಹಕರ ಅನುಭವ ವರ್ಧನೆಯನ್ನು ಹೆಚ್ಚಿಸಲು ವಿಮಾನ ನಿಲ್ದಾಣಗಳ ನಿರಂತರ ಪ್ರಯತ್ನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಫೆಬ್ರವರಿ 2021 ರಲ್ಲಿ ಸ್ವೀಕರಿಸಿದ ಪ್ರತಿಷ್ಠಿತ ಎಸಿಐ ವರ್ಲ್ಡ್ಸ್  ವಾಯ್ಸ್ ಆಫ್ ದಿ ಕಸ್ಟಮರ್ ಪ್ರಶಸ್ತಿಯ ಬೆನ್ನಲ್ಲೇ ಈ ಮಾನ್ಯತೆಯನ್ನು ಪಡೆದುಕೊಂಡಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಏಷ್ಯಾ ಫೆಸಿಫಿಕ್ ವಲಯದಿಂದ ಈ ಅಸ್ಕರ್ ಮಾನ್ಯತೆಯನ್ನು ಪಡೆದ ಭಾರತದ ಮೂರನೇ ವಿಮಾನ ನಿಲ್ದಾಣವಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News