×
Ad

ಕಾಲೇಜು ವಿದ್ಯಾರ್ಥಿನಿ ನಾಪತ್ತೆ : ದೂರು ದಾಖಲು

Update: 2022-03-23 20:53 IST

ಸುಳ್ಯ: ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜಿನ ದ್ವಿತೀಯ ಬಿ.ಎ.ಎಂ.ಎಸ್ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮದೀಹಾ ಇಮ್ರಾನ್ (20) ನಾಪತ್ತೆಯಾದ ವಿದ್ಯಾರ್ಥಿನಿ.

ಉತ್ತರ ಪ್ರದೇಶದ ಅಜ್ಮಘರ್‍ನ ತೋಲಾ ಸಗರಿ ಗ್ರಾಮದ ಮಹಮ್ಮದ್ ಇಮ್ರಾನ್ ಖಾನ್ ಮಲ್ಲಿಕ್ ರ ಪುತ್ರಿ ಈಕೆ ಮಾ.20ರಂದು ರಾತ್ರಿ 8 ಗಂಟೆಗೆ ಹಾಜರಾತಿ ಪರಿಶೀಲನೆ ಸಮಯದಲ್ಲಿ ಗೈರು ಹಾಜರಾಗಿದ್ದು, ಎಲ್ಲರಲ್ಲೂ ವಿಚಾರಿಸಲಾಗಿ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದು,  ಮದೀಹಾ ಇಮ್ರಾನ್ ನ ಹಿರಿಯ ಸಹೋದರ ಇದೇ ಸಂಸ್ಥೆಯಲ್ಲಿ ಮೂರನೇ ವರ್ಷದ ಬಿ.ಎ.ಎಂ.ಎಸ್ ವ್ಯಾಸಂಗ ಮಾಡುತ್ತಿರುವ ಮಹಮ್ಮದ್ ಇಬ್ರಾನ್‍ನಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಇಲ್ಲದೇ ಇದ್ದುದರಿಂದ ಸಂಸ್ದೆಯ ಸಿಸಿ ಟಿವಿಯಲ್ಲಿ  ಪರಿಶೀಲಿಸಿದಾಗ ಮಾ. 20 ರಂದು ಅಪರಾಹ್ನ 2.30 ಗಂಟೆಗೆ ಹಾಸ್ಟೆಲ್‍ನಿಂದ ಬ್ಯಾಗ್ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ಕಾಣೆಯಾದ ವಿದ್ಯಾರ್ಥಿನಿಯನ್ನು ಪತ್ತೆ ಮಾಡಿಕೊಡಬೇಕಾಗಿ ಸುಳ್ಯ ಪೊಲೀಸರಿಗೆ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಿನ್ಸಿಪಾಲ್ ಡಾ. ಲೀಲಾಧರ್ ದೂರಿನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News