ಚಿಕನ್ ಸ್ಟಾಲ್‍ನಲ್ಲಿ ವಿದ್ಯುತ್ ಅವಘಡ: ಕೆಲಸಗಾರ ಮೃತ್ಯು
Update: 2022-03-23 22:24 IST
ಪಡುಬಿದ್ರಿ: ಕೋಳಿ ಅಂಗಡಿಯಲ್ಲಿ ವಿದ್ಯುತ್ ಅವಘಡದಲ್ಲಿ ಕೆಲಸಗಾರನೋರ್ವ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಪಡುಬಿದ್ರಿ ಕಂಚಿನಡ್ಕ ನಿವಾಸಿ ಬಶೀರ್ (47) ಎಂದು ಗುರುತಿಸಲಾಗಿದೆ. ಇವರು ಬಾಲಗಣಪತಿ ದೇವಸ್ಥಾನ ರಸ್ತೆಯಲ್ಲಿನ ಬೆರಂದಿ ಕೆರೆ ಸಮೀಪದ ಗಿರಿ ಚಿಕನ್ ಸೆಂಟರ್‍ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೋಳಿಯನ್ನು ಕ್ಲೀನ್ ಮಾಡಲು ಯಂತ್ರದೊಳಕ್ಕೆ ಹಾಕುವ ವೇಳೆ ವಿದ್ಯುತ್ ಪ್ರವಹಿಸಿ ಈ ಘಟನೆಯು ಸಂಭವಿಸಿದೆ. ಇನ್ನೋರ್ವ ಕಾರ್ಮಿಕ ಮಹಮ್ಮದ್ ಖುರ್ಷಿದ್ ಶೇಖ್ (25) ಕೂಡಾ ವಿದ್ಯುದಾಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಶೀರ್ ಪತ್ನಿ ಹಾಗೂ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.