ಪುದು: ನರ್ಸಿಂಗ್ ತರಬೇತಿಗೆ ಆಯ್ಕೆಯಾದ ಆಶಾ ಕಾರ್ಯಕರ್ತೆಗೆ ಸನ್ಮಾನ

Update: 2022-03-24 04:45 GMT

ಬಂಟ್ವಾಳ, ಮಾ.23: ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್ ತರಬೇತಿಗೆ ಆಯ್ಕೆಗೊಂಡ ಪುದು ಗ್ರಾಮದ ಆಶಾ ಕಾರ್ಯಕರ್ತೆ ಸುಕೇತರಿಗೆ ಗ್ರಾಮದ ಕುಂಜತ್ಕಲ ಅಂಗನವಾಡಿಯಲ್ಲಿ ಬುಧವಾರ ಸನ್ಮಾನಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್ ತರಬೇತಿಗೆ ರಾಜ್ಯ ಸರಕಾರದಿಂದ ಒಟ್ಟು 40 ಮಂದಿ ಆಯ್ಕೆಯಾಗಿದ್ದು, ಆ ಪೈಕಿ ಬಂಟ್ವಾಳ ತಾಲೂಕಿನಿಂದ ಸುಕೇತ ಒಬ್ಬರೇ ಆಯ್ಕೆಯಾಗಿದ್ದಾರೆ.

ಈ ವೇಳೆ ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೊ, ಸದಸ್ಯರಾದ ನಝೀರ್, ಭಾಸ್ಕರ, ಅಂಗನವಾಡಿ ಶಿಕ್ಷಕಿ ಪದ್ಮಾವತಿ, ಸಹಾಯಕಿ ಶಿಕ್ಷಕಿ ರೇವತಿ, ಸ್ಥಳೀಯರಾದ ಮುಹಮ್ಮದ್, ಅಬ್ದುಲ್ ರಝಾಕ್, ಉಸ್ಮಾನ್, ನಿರ್ಷಾದ್, ಇರ್ಫಾನ್, ಮುಸ್ತಫಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News