×
Ad

ಶುಕ್ರವಾರ ತಲಪಾಡಿಯಲ್ಲಿ 'ಮಾಲಿಕಿ' ಪದವಿ ಪ್ರದಾನ ಸಮಾರಂಭ

Update: 2022-03-24 23:49 IST

ತಲಪಾಡಿ: ಮಂಗಳೂರು ತಾಲೂಕಿನ ತಲಪಾಡಿ ಬಿಲಾಲ್ ಜುಮಾ ಮಸ್ಜಿದ್‌ನಲ್ಲಿ ನಡೆಯುತ್ತಿರುವ ಖಾಝಿ ಬಾಪಕುಂಞಿ ಮುಸ್ಲಿಯಾರ್ ಸ್ಮಾರಕ 'ಮಾಲಿಕ್ ದೀನಾರ್ ಉರ್ದು- ಇಸ್ಲಾಮಿಕ್ ಕ್ಯಾಂಪಸ್' ನಲ್ಲಿ ಒಂದು ವರ್ಷದ  ಕೋರ್ಸ್ ಮುಗಿಸಿದ ಎಂಟು ಮಂದಿ ವಿದ್ಯಾರ್ಥಿಗಳಿಗೆ ಮಾರ್ಚ್ 25 ಶುಕ್ರವಾರ ತಲಪಾಡಿ ಬಿಲಾಲ್ ಜುಮಾ ಮಸ್ಜಿದ್‌ನಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 'ಮಾಲಿಕಿ' ಪದವಿ ಪ್ರದಾನ ಮಾಡಲಾಗುವುದು.

ಸ್ಥಳೀಯ ಜಮಾಅತ್ ಅಧ್ಯಕ್ಷ ಯಾಕೂಬ್ ಪೂಮಣ್ಣು ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ತಲಪಾಡಿ ಸಂಯುಕ್ತ ಜಮಾಅತ್ ನಾಇಬ್ ಖಾಝಿ, ಕರ್ನಾಟಕ ಜಂಇಯ್ಯತುಲ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹುಸೈನ್ ಸ‌ಅದಿ ಕೆಸಿ ರೋಡ್ ಉದ್ಘಾಟಿಸಲಿದ್ದಾರೆ. ಮಸ್‌ನವಿ ಗ್ಲೋಬಲ್ ಅಕಾಡೆಮಿ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಮದನಿ‌ ಅಲ್ ಹಾದಿ ತಂಙಳ್ ಉಜಿರೆ ಪದವಿ ಪ್ರದಾನ ಮಾಡಲಿದ್ದು, ಜಾಮಿಆ ಮಾಲಿಕ್ ದೀನಾರ್ ಪ್ರಿನ್ಸಿಪಾಲ್ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಸಂದೇಶ ಭಾಷಣ ಮಾಡುಲಿದ್ದಾರೆ.

ಉಪ ಪ್ರಾಂಶುಪಾಲ ಮೌಲಾನಾ ಅಹ್ಮದ್ ರಝಾ ಖಾನ್ ಅಂಜದಿ, ಅಲ್ ಮರ್ಕಝಿ, ಹಾನಗಲ್, ಅಲ್ ಹಾಫಿಝ್ ಮುಹಮ್ಮದ್ ವಹೀದ್ ನ‌ಈಮಿ ಅಜ್ಮೀರ್, ಬಶೀರ್ ಅಹ್ಸನಿ ತೋಡಾರ್, ಜಾಬಿರ್ ಹಸನ್ ಫಾಝಿಲ್, ಮಸ್‌ಊದ್ ಬಾಹಸನಿ, ಉಸ್ಮಾನ್ ಮದನಿ ಬಾಳೆಪುಣಿ, ಅಬ್ದುಲ್ ರಹ್ಮಾನ್ ಅಮಾನಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಪೂಮಣ್ಣು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News