ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ದುರುಪಯೋಗದ ವಿರುದ್ಧ ವಿದ್ಯಾರ್ಥಿ ಸಮನ್ವಯ ಸಮಿತಿಯಿಂದ ಪ್ರತಿಭಟನೆ

Update: 2022-03-25 10:59 GMT

ಮಂಗಳೂರು, ಮಾ.25: ಹಿಜಾಬ್ ವಿಚಾರವಾಗಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ದುರುಪಯೋಗಪಡಿಸುವ ಮೂಲಕ ಕೆಲವು ಕಾಲೇಜುಗಳು ಮತ್ತು ಸರಕಾರ ಅಸಂವಿಧಾನಿಕ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ  ಮಂಗಳೂರು ವಿಶ‍್ವವಿದ್ಯಾನಿಲಯದ ವಿದ್ಯಾರ್ಥಿ ಸಮನ್ವಯ ಸಮಿತಿಯು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ಆರಂಭಗೊಂಡಿದೆ.

ಇಂದು ಅಪರಾಹ್ನ 3:30ರ ಸುಮಾರಿಗೆ ನಗರದ ಕ್ಲಾಕ್ ಟವರ್ ಬಳಿ ಜಮಾಯಿಸಿರುವ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ರಸ್ತೆಯಲ್ಲಿ ಧರಣಿ‌ ಕುಳಿತ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವೇಳೆ ಹಿರಿಯ ಅಧಿಕಾರಿಗಳು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸದಂತೆ ಪ್ರತಿಭಟನಾಕಾರರ ಮನವೊಲಿಸಿದರು. ಅದರಂತೆ ರಸ್ತೆಯಿಂದ ಎದ್ದರೂ ಪ್ರತಿಭಟನೆ ಮುಂದುವರಿದಿದೆ.

ವಿದ್ಯಾರ್ಥಿ ನಾಯಕಿಯರಾದ ಹಿಬಾ ಶೇಖ್, ಗೌಸಿಯಾ, ಆಯತ್ ಮಾತನಾಡಿದರು.

ವಿದ್ಯಾರ್ಥಿ ಸಮನ್ವಯ ಸಮಿತಿಯ ಅಧ್ಯಕ್ಷ ರಿಯಾಝ್‍ ಅಂಕತ್ತಡ್ಕ, ಸಂಚಾಲಕ ಅಶಾಮ್‍, ಮಾಧ್ಯಮ ವಕ್ತಾರ ಜಾಬೀರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News