×
Ad

​ಮಾ.28: ರಮಳಾನ್ ಆಡಿಯೋ ಪುಸ್ತಕ ಬಿಡುಗಡೆ

Update: 2022-03-27 18:09 IST

ಮಂಗಳೂರು : ಕರ್ನಾಟಕ ರಾಜ್ಯ ಎಸ್‌ವೈಎಸ್ ಮೀಡಿಯಾ ಪ್ರಕಾಶನಗೊಳಿಸುವ ’ರಮಳಾನ್’ ಆಡಿಯೋ ಪುಸ್ತಕ ಬಿಡುಗಡೆಯು ಮಾ.28ರಂದು ನಡೆಯಲಿದೆ.

ಈ ಆಡಿಯೋ ಪುಸ್ತಕವು ಉಚಿತವಾಗಿ ಲಭ್ಯವಾಗಲಿದೆ. ಕನ್ನಡ ಮುಸ್ಲಿಂ ಸಾಹಿತ್ಯದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು ಸುಮಾರು 10 ಲಕ್ಷ ಕೇಳುಗರನ್ನು ತಲುಪುವ ಗುರಿ ಹೊಂದಿದೆ. ಈ ಆಡಿಯೋ ಪುಸ್ತಕಕ್ಕೆ ಮುಆದ್ ಜಿ.ಎಂ. ಧ್ವನಿ ನೀಡಿದ್ದು, ’ಅವರ್ ಬುಕ್ಸ್’ನ ’ರಮಳಾನ್’ ಪುಸ್ತಕವನ್ನು ಬಳಸಲಾಗಿದೆ. ಈ ಪುಸ್ತಕದ ’ಈ-ಬುಕ್’ ಕೂಡ ಲಭ್ಯವಿದ್ದು ಓದುಗರಿಗೆ ಉಚಿತವಾಗಿ ಸಿಗಲಿದೆ ಎಂದು ಎಸ್‌ವೈಎಸ್ ಮಾಧ್ಯಮ ಕಾರ್ಯದರ್ಶಿ ಹಮೀದ್ ಬಜ್ಪೆತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News