ಮಾ. 28ರಿಂದ ಮಂಗಳೂರು - ದಿಲ್ಲಿ ವಿಮಾನ ಸೇವೆ ಆರಂಭ
Update: 2022-03-27 18:44 IST
ಮಂಗಳೂರು : ಮಂಗಳೂರಿನಿಂದ ದಿಲ್ಲಿಗೆ ಮಾ.28ರಿಂದ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.
ಮಾ.28ರಿಂದ ಇಂಡಿಗೋ ವಿಮಾನವು ದಿಲ್ಲಿಗೆ ಸಂಚಾರ ಆರಂಭಿಸಲಿದ್ದು, ಬೆಳಗ್ಗಿನ ಜಾವ 2.45 ಮಂಗಳೂರಿನಿಂದ ಹೊರಟು 4.20ಕ್ಕೆ ಪುಣೆ ತಲುಪಲಿದೆ. 35 ನಿಮಿಷದ ವಿಶ್ರಾಂತಿಯ ಬಳಿಕ ಪುಣೆಯಿಂದ ಹಾರಾಟ ಆರಂಭಿಸಿ ಬೆಳಗ್ಗೆ 6.55ಕ್ಕೆ ದಿಲ್ಲಿ ತಲುಪಲಿದೆ ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.