ಪಾವೂರು: ಕರು, ಹಸುಗಳ ಪ್ರದರ್ಶನ
ಮಂಗಳೂರು : ದ.ಕ.ಜಿಪಂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಾವೂರು ಗ್ರಾಪಂನ ಸಂಯುಕ್ತ ಆಶ್ರಯದಲ್ಲಿ ಪಾವೂರು ಗ್ರಾಮದ ಕಂಬಳಪದವು ಪಶು ಚಿಕಿತ್ಸಾಲಯದ ಆವರಣದಲ್ಲಿ ರವಿವಾರ ಮಿಶ್ರತಳಿ ಕರು, ಹಸುಗಳ ಪ್ರದರ್ಶನ, ಮಾಹಿತಿ ಶಿಬಿರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು
ಗೋವುಗಳ ರಕ್ಷಣೆಗೆ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾವೂರು ಗ್ರಾಪಂ ಮಾಜಿ ಉಪಾಧ್ಯಕ್ಷ ದುಗ್ಗಪ್ಪಪೂಜಾರಿ ಈ ಪಶು ಪ್ರದರ್ಶನದಲ್ಲಿ ಪಾವೂರು ಮಾತ್ರವಲ್ಲದೆ ಬೋಳಿಯಾರು, ಪಜೀರ್ ಗ್ರಾಮದ ಪಶುಗಳು ಒಂದೆಡೆ ಸೇರಿಸುವಂತಾಗಿದೆ. ತಜ್ಞ ವೈದ್ಯರು ನೀಡುವ ಮಾಹಿತಿ ಪಾಲಿಸಬೇಕಿದೆ ಎಂದರು.
ದ.ಕ.ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಗ್ರಾಪಂ ಸದಸ್ಯರಾದ ವಲೇರಿಯನ್ ಡಿಸೋಜ, ಚಂದ್ರಾವತಿ ಪೂಜಾರಿ, ಇಕ್ಬಾಲ್ ಇನೋಳಿ, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ದೈಹಿಕ ಶಿಕ್ಷಣ ಶಿಕ್ಷಕಿ ಶಾಲಿನಿ, ತೀರ್ಪುಗಾರರಾದ ಡಾ.ಶ್ರೀನಿವಾಸ, ಡಾ.ರಚನಾ, ಡಾ.ವಿಶಾರ್ ಅಡ್ಯ ಉಪಸ್ಥಿತರಿದ್ದರು.
ಪಶುಪಾಲನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಶಿವಣ್ಣ ಸ್ವಾಗತಿಸಿದರು. ಡಾ.ಪ್ರಸನ್ನ ಕುಮಾತ್ ಟಿ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕೆ.ಅಶೋಕ್ ವಂದಿಸಿದರು. ಪವಿತ್ರ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.