ಸ್ಕೂಟರ್ ಕಳವು
Update: 2022-03-27 21:24 IST
ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲರೈ ಕ್ರಾಸ್ ಬಳಿಯ ಕ್ಯಾಂಟೀನ್ ಎದುರುಗಡೆ ನಿಲ್ಲಿಸಿದ್ದ ಸ್ಕೂಟರ್ ಕಳವಾದ ಬಗ್ಗೆ ದೂರು ದಾಖಲಾಗಿದೆ.
ಮಾ.26ರಂದು ಸಂಜೆ 5.35ಕ್ಕೆ ಕ್ಯಾಂಟೀನ್ ಎದುರುಗಡೆ ನಿಲ್ಲಿಸಿ ಒಳಗಡೆ ಹೋಗಿ ಮರಳಿ ಬಂದು ನೋಡಿದಾಗ ಕೆಲವೇ ನಿಮಿಷಗಳಲ್ಲಿ ಸ್ಕೂಟರ್ ಕಳವಾಗಿದೆ ಎಂದು ಸ್ವಸ್ತಿಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.