ಮಾಣಿ ಕ್ವಾಲಿಟಿ ಫ್ರೆಂಡ್ಸ್ ವತಿಯಿಂದ ಕ್ರೀಡಾಕೂಟ : ಶ್ರೀ ರಾಮ್ ಶಂಭೂರು, ಸತ್ಯ ದೇವತಾ ಬೊಳ್ಳೂರು ತಂಡಕ್ಕೆ ಪ್ರಶಸ್ತಿ

Update: 2022-03-28 17:40 GMT

ವಿಟ್ಲ : ಮಾಣಿ ಕ್ವಾಲಿಟಿ ಫ್ರೆಂಡ್ಸ್ ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ ರವಿವಾರ ಮಾಣಿ ಗಾಂಧಿ ಮೈದಾನದಲ್ಲಿ ನಡೆಯಿತು.

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿ ಗುತ್ತು ಪಂದ್ಯಾಟವನ್ನು ಉದ್ಘಾಟಿಸಿದರು. ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ನಾಗರಾಜ್ ಶೆಟ್ಟಿ ಮಾಣಿ, ಮಾಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿ.ಕುನ್ನಾ ಪಿರೇರಾ, ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಸುಜಾತ, ಪೆರಾಜೆ ಗ್ರಾಮ ಪಂಚಾಯತ್ ಸದಸ್ಯ ಕುಶಲ ಎಂ.ಪೆರಾಜೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ನೇರಳಕಟ್ಟೆ, ಅಶೋಕ್ ರೈ, ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಶೆಟ್ಟಿ ಕಲ್ಲಾಜೆ, ನೇರಳಕಟ್ಟೆ ಸಿ.ಎ.ಬೇಂಕ್ ನಿರ್ದೇಶಕ ನಿರಂಜನ್ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಝಾಕ್ ಕೋರ್ಯ, ಕಾರ್ಯದರ್ಶಿ ಮಜೀದ್ ಸೂರಿಕುಮೇರು, ಮಾಣಿ ವಲಯ ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಬೇಬಿ ನಾಯ್ಕ್, ಅಧ್ಯಕ್ಷ ಸಂಪತ್ ಕೋಟ್ಯಾನ್, ಉದ್ಯಮಿ ಗಳಾದ ಅರುಣ್ ಶೆಟ್ಟಿ ಸಾಗು, ಪುಷ್ಪರಾಜ್ ಶೆಟ್ಟಿ ಸಾಗು, ಹರೀಶ್ ಶೆಟ್ಟಿ ಮಾಣಿ, ನಾಗರಾಜ್ ಪೂಜಾರಿ, ಮಾರ್ಷಲ್ ಪಾಯಸ್, ಅನೀಶ್ ಆಳ್ವ, ಅಣ್ಣಿ ಪೂಜಾರಿ ಅಡ್ಲಬೆಟ್ಟು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ವಾಲಿಟಿ ಫ್ರೆಂಡ್ಸ್ ಅಧ್ಯಕ್ಷ ವಿಕೇಶ್ ಶೆಟ್ಟಿ ಸ್ವಾಗತಿಸಿ, ಮಜೀದ್ ಮಾಣಿ ವಂದಿಸಿದರು. ನಝೀರ್ ಕುಕ್ಕಾಜೆ, ಶ್ರೇಯಸ್, ನೀತು ವಿವಿಧ ಕಾರ್ಯಕ್ರಮ ನಿರೂಪಿಸಿದರು.

ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ರಾಮ್ ಶಂಭೂರು ಪ್ರಥಮ, ನವಯುಗ ಕುಕ್ಕಾಜೆ ದ್ವಿತೀಯ, ಸತ್ಯದೇವತಾ ಕನಪಾದೆ ತೃತೀಯ ಹಾಗೂ ಟಿಕ್ಕಾ ಪಾಯಿಂಟ್ ಕಲ್ಲಡ್ಕ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು, ಶಂಭೂರು ತಂಡದ ಅಚ್ಚು, ಧನುಂಜಯ ಮತ್ತು ಕುಕ್ಕಾಜೆ ತಂಡದ ಝಕರಿಯ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು.

ವಾಲಿಬಾಲ್ ಪಂದ್ಯಾಟದಲ್ಲಿ ಸತ್ಯದೇವತಾ ಬೊಳ್ಳಾರ್ ತಂಡ ಪ್ರಥಮ, ನೇತಾಜಿ ಗೆಳೆಯರ ಬಳಗ ದ್ವಿತೀಯ, ಫ್ರೆಂಡ್ಸ್ ಕೊರತಿಗುರಿ ತಂಡ ತೃತೀಯ ಹಾಗೂ ನವಯುಗ ಉರ್ದಿಲ ತಂಡವು ಚತುರ್ಥ ಸ್ಥಾನವನ್ನು ಗಳಿಸಿಕೊಂಡಿತು. ಬೊಳ್ಳಾರ್ ತಂಡದ ಲೋಕೇಶ, ಪ್ರಶಾಂತ ಹಾಗೂ ನೇತಾಜಿ ತಂಡದ ಭುವನ್ ವೈಯಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News