×
Ad

ಮಂಗಳೂರು: ಬೆಳ್ಳಿ ಮಹೋತ್ಸವ ಸಂಭ್ರಮದಲ್ಲಿ ಅಥೆನಾ ಆಸ್ಪತ್ರೆ

Update: 2022-03-30 21:02 IST

ಮಂಗಳೂರು : ವೈದ್ಯಕೀಯ ಸೇವೆಯಲ್ಲಿ ನಿರಂತರ 25 ವರ್ಷಗಳಿಂದ ಸಾಧನೆಗೈದ ನಗರದ ಫಳ್ನೀರ್ ರಸ್ತೆಯಲ್ಲಿರುವ ಅಥೆನಾ ಆಸ್ಪತ್ರೆಯು ಮಾ. 30ರಂದು ತನ್ನ ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿಡಿದು ಕೇರಳದ ಕಲ್ಲಿಕೋಟೆಯವರೆಗೂ ಮನೆ ಮಾತಾಗಿರುವ ಈ ಆಸ್ಪತ್ರೆಯು ಆಧುನಿಕ ಸುಸಜ್ಜಿತ ಸವಲತ್ತುಗಳನ್ನು ಅಳವಡಿಸಿಕೊಂಡು ದಿನದ 24 ತಾಸುಗಳ ಕಾಲ ನಿರಂತರವಾಗಿ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸುತ್ತಾ ಬಂದಿದೆ.  ಸದಾ ಆರೋಗ್ಯ ಕಾಳಜಿಯನ್ನು ತನ್ನ ಧ್ಯೇಯವಾಗಿರಿಸಿ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಮಿತದರದಲ್ಲಿ ನೀಡುವ ಉದ್ಧೇಶದೊಂದಿಗೆ ಈ ಆಸ್ಪತ್ರೆಯು ಉತ್ತಮ ಸೇವಾ ಪರಂಪರೆ ಹೊಂದಿದೆಯೆಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಆರ್.ಎಸ್.ಶೆಟ್ಟಿಯಾನ್ ತಿಳಿಸಿದ್ದಾರೆ.

ಈ ಅಥೆನಾ ಆಸ್ಪತ್ರೆಯು ಸುಸಜ್ಜಿತವಾದ ವಿವಿಧ ರೂಮ್‍ಗಳು, ಮೆಡಿಕಲ್ ಇಂಟೆನ್ಸೀವ್ ಕೇರ್ ಯೂನಿಟ್, ರೆಡಿಯಾಲಿಜಿ ವಿಭಾಗ, ಕೀಹೋಲ್ ಸರ್ಜರಿ (ಲ್ಯಾಪರ್‍ಸ್ಕೋಪಿ) ಸಂಧು ಜೋಡಣೆ, ಸ್ಪೈನಲ್ ಇಂಜ್ಯುರಿ ವಿಭಾಗ, ಶಿಶು ನಿಗಾ ಘಟಕ, ಫಾರ್ಮೆಸಿ, ಆ್ಯಂಬುಲೆನ್ಸ್ ಸೇವೆ, ಅಂತಾರಾಷ್ಟ್ರೀಯ ಗುಣಮಟ್ಟದ ಶಸ್ತ್ರಚಿಕಿತ್ಸೆ ಮತ್ತು ಲೇಬರ್ ಕೊಠಡಿ, ತಜ್ಞ ವೈದ್ಯರು ಮತ್ತು ನರ್ಸಿಂಗ್ ಸೇವೆ, ಟ್ರೌಮಾ ಮತ್ತು ಎಮರ್ಜೆನ್ಸಿ ಕೇರ್, ಕಿಡ್ನಿ ಫೌಂಡೇಶನ್ (ಡಯಾಲಿಸೀಸ್), ಪಿಡಿಯಾಟ್ರಿಕ್ ಇಂಟೆನ್ಸೀವ್ ಕೇರ್ ಯೂನಿಟಿ, ಪೈಲ್ಸ್ ಕಾಯಿಲೆಗೆ ಲೇಸರ್ ಚಿಕಿತ್ಸೆ ಸಿಟಿ ಸ್ಕ್ಯಾನ್ ಹಾಗೂ ಡಾ. ನಿಶಿತಾರವರ ಸೆಂಟರ್ ಆಫ್ ಲೇಸರ್ ಆ್ಯಂಡ್ ಕಾಸ್ಮೆಟಿಕ್ ಗೈನಕಾಲಜಿಸ್ಟ್ ಸವಲತ್ತುಗಳನ್ನು ಹೊಂದಿವೆ.

ಆರೋಗ್ಯ ಕ್ಷೇತ್ರದೊಂದಿಗೆ ಆರೋಗ್ಯ ಶಿಕ್ಷಣದಲ್ಲೂ ಮುಂಚೂಣಿಯಲ್ಲಿರುವ ಅಂಗಸಂಸ್ಥೆ ಅಥೆನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಯನ್ಸಸ್ ಕಳೆದ ವರ್ಷಗಳಿಂದ ವೈದ್ಯಕೀಯ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ.  ಜನರಲ್ ನರ್ಸಿಂಗ್ ಮತ್ತು ಮಿಡ್‍ವೈಫರಿ ಡಿಪ್ಲೋಮ, ಬಿಎಸ್‍ಸಿ ನರ್ಸಿಂಗ್, ಪಿ.ಬಿ.ಎಸ್‍ಸಿ ನರ್ಸಿಂಗ್, ಎಂಎಸ್‍ಸಿ ನರ್ಸಿಂಗ್, ಬಿಎಸ್‍ಸಿ ರೀನಲ್ ಡಯಾಲಿಸೀಸ್ ಟೆಕ್ನಾಲಿಜಿ, ಬಿಎಸ್‍ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬಿಎಸ್‍ಸಿ ಅನೇಸ್ಟಿಸಿಯಾ ಮತ್ತು ಅಪರೇಶನ್ ಥಿಯೇಟರ್ ಟೆಕ್ನಾಲಜಿ, ಬಿ.ಎಸ್.ಸಿ ಇಮೇಜಿಂಗ್ ಟೆಕ್ನಾಲಜಿ, ಬಿಎಸ್‍ಸಿ ಎಮರ್ಜೆನ್ಸಿ ಮತ್ತು ಟ್ರೌಮಾ ಕೇರ್ ಟೆಕ್ನಾಲಜಿ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಈ ಶಿಕ್ಷಣ ಸಂಸ್ಥೆಯು ಕರ್ನಾಟಕ ಮತ್ತು ಇಂಡಿಯನ್ ನರ್ಸಿಂಗ್ ಕೌನ್ಸಿಲ್‍ನ ಮಾನ್ಯತೆ ಪಡೆದಿದೆ. ಆರ್ಥಿಕವಾಗಿ ಹಿಂದುಗಳಿದ ವಿದ್ಯಾರ್ಥಿಗಳಿಗೆ ಇಲ್ಲಿ ಕೆಲವು ಸೀಟುಗಳನ್ನು ಮೀಸಲಿರಿಸಿದ್ದು ಮಿತವ್ಯಯದಲ್ಲಿ ವೃತ್ತಿಪರ ಕೋರ್ಸುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸೇವಾ ಮನೋಭಾವ ಹೊಂದಿರುವ ಪ್ರಾಂಶುಪಾಲರು, ನುರಿತ ಶಿಕ್ಷಕರು, ಸುಸಜ್ಜಿತ ಪ್ರಯೋಗಾಲಯದೊಂದಿಗೆ ಉತ್ತಮ ಫಲಿತಾಂಶದಿಂದಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆಯೆಂದು ಸಂಸ್ಥೆಯ ಚೆಯರ್‌‌ಮ್ಯಾನ್ ಆರ್.ಎಸ್. ಶೆಟ್ಟಿಯಾನ್ ತಿಳಿಸಿದ್ದು, ಈ ಸುಸಂದರ್ಭದಲ್ಲಿ ಯಶಸ್ಸಿಗೆ ಕಾರಣೀಕರ್ತರಾದ ಸಾರ್ವಜನಿಕರು, ವೈದ್ಯರ ತಂಡ, ನರ್ಸಿಂಗ್ ತಂಡ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News