×
Ad

ಯುವಕನಿಗೆ ಹಲ್ಲೆ ಪ್ರಕರಣ; ಕರ್ನೂಲ್ ಎಸ್ಪಿ ಸುಧೀರ್ ಕುಮಾರ ರೆಡ್ಡಿ ಜೊತೆ ಮಾತಾಡಿದ ಸಚಿವ‌ ಮುರುಗೇಶ್ ನಿರಾಣಿ

Update: 2022-03-31 15:51 IST
ಮುರುಗೇಶ್ ನಿರಾಣಿ

ಬೆಂಗಳೂರು: ಶ್ರೀಶೈಲದಲ್ಲಿ ಭಕ್ತಾದಿಗಳ ಮೇಲೆ ಆದ ಹಲ್ಲೆ, ಗಲಾಟೆ ಬಗ್ಗೆ ಬಹಳ ನೋವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗು ಬೀಳಗಿ ಶಾಸಕ  ಮುರುಗೇಶ್‌ ನಿರಾಣಿ ತಿಳಿಸಿದರು.

“ನನ್ನ ಮತ ಕ್ಷೇತ್ರ ಬೀಳಗಿಯಾ ಯುವಕ ಶ್ರೀಶೈಲ್ ವಾರಿಮಠ ಅವರಿಗೆ ಚಾಕು ಇರಿತ ಬಹಳ ನೋವು ತಂದಿದೆ. ಈ ಹಿನ್ನೆಲೆ ಆಂಧ್ರ ಪ್ರದೇಶ  ಕರ್ನೂಲ್ ಜಿಲ್ಲೆ ಎಸ್ ಪಿ ಸುಧೀರ್ ಕುಮಾರ ರೆಡ್ಡಿ ಜೊತೆ ಮಾತಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಘಟನೆಯ ಸವಿವರ ಕೇಳಿದ್ದೇನೆ‌. ಗಾಯಗೊಂಡ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ ವಾರಿಮಠ, ಮತ್ತಿತರ  ಚಿಕಿತ್ಸೆಗೆ  ಅಲ್ಲಿ ಆಸ್ಪತ್ರೆ, ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ.

ಕನ್ನಡಿಗರ ಮೇಲೆ ಹಲ್ಲೆ ವಾಹನ ಜಖಂಗೊಳಿಸಿದ್ದು ಖಂಡನೀಯ, ಕನ್ನಡಿಗರು ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಶಾಂತಿಯಿಂದ ಇರಿ. ಸರಕಾರ ಪರಿಸ್ಥಿತಿ ನಿರ್ವಹಿಸಲು ಕ್ರಮ ಕೈಗೊಳ್ಳುತ್ತಿದೆ" ಎಂದು ನಿರಾಣಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News