×
Ad

ಬೆಂಗಳೂರು: ವೇತನ ನೀಡದ ಆರೋಪ; ಚಾಲಕ ಆತ್ಮಹತ್ಯೆ

Update: 2022-03-31 20:54 IST

ಬೆಂಗಳೂರು, ಮಾ.31: ಮಾಲಕರು ಸಂಬಳ ಕೊಡದ ಹಿನ್ನೆಲೆಯಲ್ಲಿ ಲಾರಿ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೋವಿಂದರಾಜನಗರದಲ್ಲಿ ಈ ಘಟನೆ ನಡೆದಿದ್ದು, ತುಮಕೂರು ಮೂಲದ ಕಿರಣ್‍ಕುಮಾರ್ ಆತ್ಮಹತ್ಯೆ ಮಾಡಿಕೊಂಡರು ಎಂದು ಗುರುತಿಸಲಾಗಿದೆ.

ಕೆ.ಆರ್.ಪುರಂನ ತಿರುಮಲ ಲಾಜಿಸ್ಟಿಕ್ಸ್‍ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್‍ಕುಮಾರ್ ಗೆ ಕಂಪೆನಿಯ ಮಾಲಕ ವೇತನ ನೀಡಿಲ್ಲ. ಹಾಗಾಗಿ, ನಿನ್ನೆ ಸಂಜೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ತನ್ನ ಸಾವಿಗೆ ಲಾರಿ ಮಾಲಕನೆ ಕಾರಣ ಎಂದು ಆರೋಪಿಸಿ, ತದನಂತರ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News