ಬನ್ನಂಜೆ ಅಂಚೆ ಕಚೇರಿ ಕಟ್ಟಡ ಸ್ಥಳಾಂತರ
Update: 2022-04-01 20:38 IST
ಉಡುಪಿ : ಪ್ರಸ್ತುತ ಬಿಲ್ಲವರ ಸೇವಾ ಸಂಘದ ನಾರಾಯಣ ಗುರು ನಗರ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬನ್ನಂಜೆ ಅಂಚೆ ಕಚೇರಿಯು, ಉಡುಪಿ ಮಿನಿ ವಿಧಾನಸೌಧದ ಎದುರುಗಡೆ ಇರುವ ಜಿಲ್ಲಾ ಪಂಚಾಯತ್ ಹಳೇ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು, ಎ.4ರಿಂದ ಕಾರ್ಯಾಚರಿಸಲಿದೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.