×
Ad

ಬೆಂಗಳೂರು: ಪಬ್‍ಜಿ ಆಟಕ್ಕಾಗಿ ಹುಸಿ ಬಾಂಬ್ ಕರೆ ಮಾಡಿದ ಬಾಲಕ!

Update: 2022-04-03 20:37 IST

ಬೆಂಗಳೂರು, ಎ.3: ಪಬ್‍ಜಿ ಆಟಕ್ಕಾಗಿ ಬಾಂಬ್ ಇದೆ ಎಂದು ಪೊಲೀಸರಿಗೆ ಕರೆ ಮಾಡಿರುವ ಪ್ರಕರಣ ವರದಿಯಾಗಿದೆ.

ಮಾ.30ರಂದು ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಬಾಲಕನ ಸ್ನೇಹಿತ 2ಗಂಟೆಗೆ ಯಲಹಂಕದಿಂದ ಕಾಚಿಗುಡ್ಡ ಎಕ್ಸ್ ಪ್ರೆಸ್‍ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಪಬ್‍ಜಿ ಆಟದಲ್ಲಿ ಜೊತೆಗಾರ ಇರಲ್ಲವೆಂದು ರೈಲ್ವೇ ಸಹಾಯವಾಣಿಗೆ ಕರೆ ಮಾಡಿ ಕಾಚಿಗುಡ್ಡ ಎಕ್ಸ್‍ಪ್ರೆಸ್‍ನಲ್ಲಿ ಬಾಂಬ್ ಇದೆ ಎಂದು ಬಾಲಕ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ.

ಆ ನಂತರ, ಪ್ರಯಾಣಿಕರನ್ನ ಇಳಿಸಿ ಪೊಲೀಸರು 90 ನಿಮಿಷ ಪರಿಶೀಲಿಸಿದ್ದಾರೆ. ಸುಳ್ಳೆಂದು ತಿಳಿದ ಮೇಲೆ ಅಪ್ರಾಪ್ತ ಬಾಲಕನಾದ್ದರಿಂದ ಪೊಲೀಸರು ಪ್ರಕರಣ ದಾಖಲಿಸದೇ ಬುದ್ಧಿವಾದ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News