×
Ad

135 ಮಂದಿ ಪೊಲೀಸರಿಗೆ ಮುಖ್ಯಮಂತ್ರಿ ಪದಕ ಪ್ರದಾನ

Update: 2022-04-03 21:59 IST

ಬೆಂಗಳೂರು, ಎ.3: ದಕ್ಷತೆಯಿಂದ ಸೇವೆ ಸಲ್ಲಿಸಿರುವ ರಾಜ್ಯದ ಒಟ್ಟು 135 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಶನಿವಾರ 2021ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಿದರು. ಪೊಲೀಸ್ ಧ್ವಜ ದಿನಾಚರಣೆ ದಿನದಂದು ಕೋರಮಂಗಲದಲ್ಲಿರುವ ಕೆಎಸ್‍ಆರ್‍ಪಿ ಮೈದಾನದಲ್ಲಿ ಪದಕ ಪ್ರದಾನ ಮಾಡಲಾಯಿತು. 

ಪದಕ ಪಡೆದ ಬೆಂಗಳೂರಿನ ಅಧಿಕಾರಿ/ಸಿಬ್ಬಂದಿಗಳ ಹೆಸರು: ಪಿ.ವೀರೇಂದ್ರಕುಮಾರ್; ಡಿವೈಎಸ್‍ಪಿ; ಸಿಐಡಿ, ಆರ್.ಎನ್.ನಿಖಿಲ್‍ಕುಮಾರ್; ಎಸಿಪಿ; ಸಿಎಆರ್ ದಕ್ಷಿಣ,  ಆರ್.ರಮೇಶ್; ಸಹಾಯಕ ಕಮಾಂಡೆಂಟ್; 3ನೆ ಪಡೆ, ಕೆಎಸ್‍ಆರ್‍ಪಿ,   ಜಿ.ಎಚ್.ಕೇದಾರ್‍ನಾಥ್; ಡಿವೈಎಸ್‍ಪಿ (ಸಶಸ್ತ್ರ); ಪಿಟಿಎಸ್, ಥಣಿಸಂದ್ರ,  ಎಚ್.ಪಿ.ಶಿವಕುಮಾರ್; ಡಿವೈಎಸ್‍ಪಿ (ನಿಸ್ತಂತು); ಕೇಂದ್ರ ವಲಯ,  ಆರ್.ಪ್ರಕಾಶ್; ಇನ್‍ಸ್ಪೆಕ್ಟರ್; ಗೋವಿಂದಪುರ ಠಾಣೆ, ಯು.ಆರ್.ಮಂಜುನಾಥ್; ಇನ್‍ಸ್ಪೆಕ್ಟರ್; ಜಯನಗರ ಠಾಣೆ, ಡಿ.ಎನ್.ನಟರಾಜ್; ಇನ್‍ಸ್ಪೆಕ್ಟರ್; ಸುದ್ದಗುಂಟೆಪಾಳ್ಯ ಠಾಣೆ, ಶಿವಕುಮಾರ್ ಬಿ.ಮುಚ್ಚಂಡಿ; ಇನ್‍ಸ್ಪೆಕ್ಟರ್; ಬೇಗೂರು ಠಾಣೆ ಇವರಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿದೆ. 

ರಾವ್ ಗಣೇಶ್ ಜನಾರ್ಧನ್; ಇನ್‍ಸ್ಪೆಕ್ಟರ್; ಶಿವಾಜಿನಗರ ಸಂಚಾರ ಠಾಣೆ, ಸಿ.ನಾಗಪ್ಪ; ಇನ್‍ಸ್ಪೆಕ್ಟರ್; ಸಿಐಡಿ, ಎಸ್.ರಾಘವೇಂದ್ರ; ಪಿಐ, ಎಎಚ್‍ಟಿ; ಸಿಐಡಿ, ಸಿ.ಎಸ್.ಶಿವಣ್ಣ ನಾಯಕ್; ವಿಶೇಷ ಆರ್‍ಪಿಐ; 3ನೆ ಪಡೆ, ಕೆಎಸ್‍ಆರ್‍ಪಿ, ಎಸ್.ಇಮ್ರಾನ್; ವಿಶೇಷ ಆರ್‍ಪಿಐ;4ನೇ ಪಡೆ, ಕೆಎಸ್‍ಆರ್‍ಪಿ, ಎ.ಸಗ್ಯರಾಜ್; ವಿಶೇಷ ಆರ್‍ಪಿಐ; 9ನೇ ಪಡೆ, ಕೆಎಸ್‍ಆರ್‍ಪಿ, ಎಚ್.ಎನ್.ರಾಮಚಂದ್ರೇಗೌಡ; ಇನ್‍ಸ್ಪೆಕ್ಟರ್; ಎಫ್‍ಪಿಬಿ, ರವೀಂದ್ರ ಎಸ್.ಕೊವಳ್ಳಿ; ಗುಪ್ತಚರ ಅಧಿಕಾರಿ; ರಾಜ್ಯ ಗುಪ್ತವಾರ್ತೆ, ಬಿ.ಸಿ.ರಾಜಶೇಖರಯ್ಯ; ಪಿಎಸ್‍ಐ; ಅನ್ನಪೂರ್ಣೇಶ್ವರಿನಗರ ಠಾಣೆ, ನಿಂಗರಾಜ್ ಕೆ.ಹನ್ನಿನವರ್; ಪಿಎಸ್‍ಐ; ಹೆಣ್ಣೂರು ಠಾಣೆ, ಬಾಬು ರೆಡ್ಡಿ; ಪಿಎಸ್‍ಐ; ಕೆ.ಜಿ.ಹಳ್ಳಿ ಠಾಣೆ ಇವರಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿದೆ. 

ಶ್ರೀನಿವಾಸ; ಪಿಎಸ್‍ಐ; ಸುಬ್ರಮಣ್ಯಪುರ ಠಾಣೆ, ಎಚ್.ಕರಗಯ್ಯ; ಪಿಎಸ್‍ಐ; ಜೆ.ಪಿ.ನಗರ ಠಾಣೆ, ಸಿ.ಎನ್.ಶ್ರೀನಿವಾಸ; ಆರ್‍ಎಸ್‍ಐ; ಸಿಎಆರ್ ಕೇಂದ್ರ ಸ್ಥಾನ, ಆರ್.ಚಂದ್ರ; ಆರ್‍ಎಸ್‍ಐ; ಸಿಎಆರ್ ಪಶ್ಚಿಮ, ಬಿ.ಗುರುನಾಥ್; ಪಿಎಸ್‍ಐ (ನಿಸ್ತಂತು) ಐಎಸ್‍ಡಿ; ನಿಯಂತ್ರಣ ಕೊಠಡಿ, ಎಂ.ಶ್ರೀನಿವಾಸ; ಎಎಸ್‍ಐ, ಅಪರಾಧ ಶಾಖೆ; ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ, ಎಚ್.ಸಿ.ನರಸಿಂಹಪತಿ; ಎಆರ್‍ಎಸ್‍ಐ; ಸಿಐಡಿ, ಚಂದ್ರಶೇಖರಾಚಾರಿ; ಎಆರ್‍ಎಸ್‍ಐ; ಎಡಿಜಿಪಿ (ನೇಮಕಾತಿ) ಕಚೇರಿ, ವೈ.ನಾರಾಯಣಪ್ಪ; ಎಆರ್‍ಎಸ್‍ಐ; ಐಎಸ್‍ಡಿ, ಎಲ್.ಬಿ.ಕಾಮ್ಟೆ; ಎಆರ್‍ಎಸ್‍ಐ; ಐಎಸ್‍ಡಿ, ಎಸ್.ಅನಂತಕುಮಾರ್; ಎಎಸ್‍ಐ;ಎಸಿಬಿ, ಸುರೇಶ್ ಆರ್.ಪುಡಲಕಟ್ಟಿ; ಎಎಸ್‍ಐ (ನಿಸ್ತಂತು); ಕೇಂದ್ರ ಕಚೇರಿ, ಎನ್.ದಿನೇಶ್ ಬಾಬು; ಎಎಸ್‍ಐ (ನಿಸ್ತಂತು); ಎಸ್‍ಸಿಆರ್‍ಬಿ, ಎಂ.ಸೋಮಶೇಖರ್; ಹೆಡ್ ಕಾನ್‍ಸ್ಟೆಬಲ್; ಪೂರ್ವ ವಿಭಾಗದ ಡಿಸಿಪಿ ಕಚೇರಿ, ಶಬ್ಬೀರ್ ಖಾಜಿ ಘೋಡೆವಾಲೆ; ಸಿಎಚ್‍ಸಿ; ಹೈಗ್ರೌಂಡ್ಸ್ ಠಾಣೆ, ಕೆ.ಆರ್.ನಂದೀಶ; ಸಿಎಚ್‍ಸಿ; ಕಬ್ಬನ್‍ಪಾರ್ಕ್ ಠಾಣೆ, ಪಿ.ಸಿದ್ಧರಾಮಣ್ಣ; ಹೆಡ್ ಕಾನ್‍ಸ್ಟೆಬಲ್; ದೇವನಹಳ್ಳಿ ಠಾಣೆ ಇವರಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿದೆ. 

ಬಿ.ಎಸ್.ಚಂದ್ರಶೇಖರ್; ಹೆಡ್ ಕಾನ್‍ಸ್ಟೆಬಲ್; ಸಿಎಸ್‍ಬಿ, ಎಚ್.ಹನುಮೇಶ್; ಸಿಎಚ್‍ಸಿ;ಸಿಸಿಬಿ, ಎ.ಎನ್.ಜಯಣ್ಣ; ಹೆಡ್ ಕಾನ್‍ಸ್ಟೆಬಲ್; ಉಪ್ಪಾರಪೇಟೆ ಸಂಚಾರ ಠಾಣೆ, ಜಿ.ಕೇಶವಮೂರ್ತಿ; ಎಎಚ್‍ಸಿ; ಸಿಎಆರ್ ಕೇಂದ್ರ ಸ್ಥಾನ, ಜಿ.ಕೃಷ್ಣಕುಮಾರ್; ಎಎಚ್‍ಸಿ; ಸಿಐಡಿ,  ಜಿ.ಬಸವರಾಜು; ಎಎಚ್‍ಸಿ; ಸಿಐಡಿ ಅರಣ್ಯ ಘಟಕ, ಎನ್.ಉಮಾಶಂಕರ್; ಆರ್‍ಎಚ್‍ಸಿ; 4ನೆ ಪಡೆ, ಕೆಎಸ್‍ಆರ್‍ಪಿ, ಶಮ್ಮೀರ್ ಮೀರ್ ಜನ್ನಾವರ್; ಪೊಲೀಸ್ ಕಾನ್‍ಸ್ಟೆಬಲ್; ಸಿಸಿಬಿ, ಜಿ.ಲಾವಣ್‍ಕುಮಾರ್; ಪೊಲೀಸ್ ಕಾನ್‍ಸ್ಟೆಬಲ್; ಐಎಸ್‍ಡಿ, ಎಸ್.ಪ್ರಭುಕುಮಾರ್; ಸಿಪಿಸಿ;ಸರ್ಜಾಪುರ ಠಾಣೆ, ಶ್ರೀನಿವಾಸ; ಪಿಎಸ್‍ಐ;ಅಶೋಕನಗರ ಠಾಣೆ ಇವರಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿದೆ. 

ಎಚ್.ವಿ.ಅರುಣ್;ಎಎಸ್‍ಐ (ನಿಸ್ತಂತು); ಡಿಜಿಪಿ ಕಚೇರಿಯ ನಿಯಂತ್ರಣ ಕೊಠಡಿ, ಶ್ರೀನಿವಾಸಮೂರ್ತಿ; ಎಎಸ್‍ಐ (ನಿಸ್ತಂತು); ನಿಯಂತ್ರಣ ಕೊಠಡಿ, ಬಿ.ಈಶ್ವರ; ಹೆಡ್ ಕಾನ್‍ಸ್ಟೆಬಲ್; ಕಲಾಸಿಪಾಳ್ಯ ಠಾಣೆ, ವಿನೀತ್ ಪಿ.ಹೆಗ್ಡೆ; ಎಎಚ್‍ಸಿ;ಸಿಎಆರ್ ಕೇಂದ್ರ ಸ್ಥಾನ,  ಎಸ್.ಕುಮಾರಸ್ವಾಮಿ; ಎಎಚ್‍ಸಿ;ಸಿಎಆರ್ ಕೇಂದ್ರ ಸ್ಥಾನ, ಪ್ರದೀಪ್ ಶಂಕರ್ ಅಂದಾನಿ; ಎಎಚ್‍ಸಿ;ಸಿಎಆರ್ ಕೇಂದ್ರ ಸ್ಥಾನ, ಎನ್.ರಾಘವೇಂದ್ರ; ಹೆಡ್ ಕಾನ್‍ಸ್ಟೆಬಲ್; ಮಡಿವಾಳ ಠಾಣೆ, ಎಚ್.ಎಸ್.ಸಿದ್ಧರಾಜು; ಎಎಸ್‍ಐ; ಎಲೆಕ್ಟ್ರಾನಿಕ್ ಸಿಟಿ ಠಾಣೆ, ಭಗವಂತರಾಯ್ ಮಾಲಿಪಾಟೀಲ್; ಪಿಎಸ್‍ಐ; ಸಿಟಿ ಮಾರುಕಟ್ಟೆ ಠಾಣೆ,  ಪಿ.ಎಸ್.ಕೃಷ್ಣಕುಮಾರ್; ಇನ್‍ಸ್ಪೆಕ್ಟರ್, ಸೈಬರ್ ಅಪರಾಧ; ಸಿಐಡಿ, ಶಂಕರಾಚಾರ್; ಇನ್‍ಸ್ಪೆಕ್ಟರ್; ವಿಲ್ಸನ್‍ಗಾರ್ಡನ್ ಠಾಣೆ ಇವರಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿದೆ. 

ಮುಖ್ಯಮಂತ್ರಿಗಳ ಪದಕ ಪ್ರದಾನ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೆಂದ್ರ, ಸಚಿವ ಆನಂದಸಿಂಗ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News