×
Ad

ಮಸೀದಿಯ ಧ್ವನಿವರ್ಧಕ ಅಝಾನ್‌ಗೆ ಮಾತ್ರ ಬಳಸಲು ಹುಸೈನ್ ಸಅದಿ ಕರೆ

Update: 2022-04-07 20:38 IST
ಹುಸೈನ್ ಸಅದಿ

ಮಂಗಳೂರು : ತಲಪಾಡಿ ಸಂಯುಕ್ತ ಜಮಾಅತ್ ಅಧೀನಕ್ಕೆ ಒಳಪಟ್ಟ ಎಲ್ಲಾ ಜುಮಾ ಹಾಗೂ ನಮಾಝ್ ನಿರ್ವಹಿಸುವ (ನಿಸ್ಕಾರ) ಮಸೀದಿಗಳಲ್ಲಿ ಬಾಂಗ್ (ಆಝಾನ್)ಗೆ ಮಾತ್ರ ಬಳಸಬೇಕು ಎಂದು ತಲಪಾಡಿ ಸಂಯುಕ್ತ ಜಮಾಅತ್ ಉಪ ಖಾಝಿ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಕರೆ ನೀಡಿದ್ದಾರೆ.

ಬಾಂಗ್ ಹೊರತುಪಡಿಸಿ ಹದ್ದಾದ್, ಸ್ವಲಾತ್ ಮತ್ತು ಧಾರ್ಮಿಕ ಪ್ರವಚನ ಇತ್ಯಾದಿ ಕಾರ್ಯಗಳನ್ನು ಮಸೀದಿಯೊಳಗಿನ ಸೌಂಡ್ ಬಾಕ್ಸ್ ಮಾತ್ರ ಉಪಯೋಗಿಸಬೇಕು. ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ನಿಲುವು ಕೂಡ ಇದೇ ಆಗಿದೆ ಎಂದು ಹುಸೈನ್ ಸಅದಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News