×
Ad

ಗೂನಡ್ಕ ಮಸೀದಿಯ ದಫನ ಭೂಮಿ ತೆರವು ಆದೇಶಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ

Update: 2022-04-07 21:24 IST

ಸುಳ್ಯ : ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ದಫನ ಭೂಮಿ ತೆರವು ಆದೇಶಕ್ಕೆ ಹೈಕೋರ್ಟ್  ತಡೆಯಾಜ್ಞೆ ನೀಡಿದೆ.

ಗೂನಡ್ಕ ಬದ್ರಿಯಾ ಜುಮಾ ಮಸೀದಿಗೆ ಸಂಬಂಧಿಸಿದ ಸ.ನಂ 88/12 0.20 ಎಕ್ರೆ ಭೂಮಿಯ ಬಗ್ಗೆ ಅರಣ್ಯ ಇಲಾಖೆಯು ತೆರವು ಆದೇಶ ಹೊರಡಿಸಿದ್ದು ಇದನ್ನು ಮಸೀದಿ ಆಡಳಿತ ಮಂಡಳಿಯು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನ್ಯಾಯವಾದಿ ಎ ಎಸ್ ಪೊನ್ನಣ್ಣ ಅವರ ಮುಖಾಂತರ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

ಈ ಹಿಂದೆ ಗೂನಡ್ಕ ಮಸೀದಿಗೆ ದಫನ ಭೂಮಿಯನ್ನು ಮಂಜೂರು ಮಾಡಲು ಸಹಾಯಕ ಆಯುಕ್ತರು ಪುತ್ತೂರು ಇವರಲ್ಲಿ ಪ್ರಸ್ತಾವನೆ ಸಲ್ಲಿಸಿದ ಮೇರೇಗೆ ಕಾಯ್ದಿರಿಸಿದ 0.20 ಎಕ್ರೆ ಭೂಮಿ ಮಸೀದಿ ಆಡಳಿತ ಸಮಿತಿ ಅತಿಕ್ರಮಣ ಮಾಡಿರುವುದಾಗಿ ವ್ಯಕ್ತಿಯೋರ್ವರು ಆರೋಪಿಸಿದ್ದರು. ಅದರಂತೆ ಅರಣ್ಯ ಇಲಾಖೆ ತೆರವು ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News