×
Ad

ಪ್ರಧಾನಿಯ ನವಭಾರತ ನಿರ್ಮಾಣದ ಕನಸು ಸಾಕಾರಗೊಳಿಸಿ : ಸಚಿವ ಸುನಿಲ್ ಕುಮಾರ್

Update: 2022-04-08 23:24 IST

ಸುರತ್ಕಲ್, ಎ.8: ಪ್ರಧಾನ ಮಂತ್ರಿಯವರ ನವಭಾರತ ನಿರ್ಮಾಣದ  ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ಬಲಿಷ್ಠ ಭಾರತವನ್ನು ಕಟ್ಟಬೇಕು ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್  ಹೇಳಿದ್ದಾರೆ.

ಯುವಕ ಮಂಡಲ (ರಿ) ಕೃಷ್ಣಾಪುರ ಕಾಟಿಪಳ್ಳ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ "ಕೃಷ್ಣಾಪುರ ಹಬ್ಬ" ಸಂಭ್ರಮದಲ್ಲಿ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಯುವಕ ಮಂಡಲದ ವತಿಯಿಂದ ತಾಳಿ ಭಾಗ್ಯ ಚೆಕ್ಕನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಮುಂದಿನ ಒಂದು ವರ್ಷದಲ್ಲಿ 50 ಸಮಾಜಮುಖಿ ಉದಾತ್ತ ಯೋಜನೆಗಳ ಜೊತೆಗೆ 50 ಬಡ ಕುಟುಂಬದ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಚೆಕ್ಕನ್ನು ವಿತರಿಸುತ್ತಿರುವ ಕೃಷ್ಣಾಪುರ ಯುವಕ ಮಂಡಲದ ಯೋಜನೆಗಳು ನಿಜಕ್ಕೂ ಮೆಚ್ಚುವಂತಹುದು. ಕಾಲಕಾಲದಲ್ಲಿ ಯೋಜನೆಗಳನ್ನು ರೂಪಿಸಿ ಹೊಣೆಗಾರಿಕೆಯಿಂದ ಸಮಾಜಮುಖಿ ಆಲೋಚನೆಗಳು ವಿಸ್ತರವಾಗಬೇಕು ಎಂದು ಅವರು ಯುವಕರಿಗೆ ಕರೆ ನೀಡಿದರು.

ಸಮಾರಂಭವನ್ನು ದ. ಕ. ಜಿಲ್ಲಾ ಬಿ ಜೆ ಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ  ಉದ್ಘಾಟಿಸಿದರು.

ಬಳಿಕ‌ ಮಾತನಾಡಿದ ಅವರು,  ಯುವಕ ಮಂಡಲಗಳು ಜನರ ಮತ್ತು ಸರಕಾರದ ಮಧ್ಯೆ ಕೊಂಡಿಯಾಗಿ ನಿಲ್ಲಬೇಕು. ದೇಶವು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಲು ಯುವ ಶಕ್ತಿ ಮತ್ತು ಮಾತೃಶಕ್ತಿಯಿಂದ ಸಾಧ್ಯವಾಗಿದೆ. ಯುವುದೇ ಒಂದು ಸಂಸ್ಥೆ ಬೆಳಯಬೇಕಾದಲ್ಲಿ  ಪಂಚಶಕ್ತಿಗಳಾದ ಜ್ಞಾನಶಕ್ತಿ, ಇಚ್ಚಾ ಶಕ್ತಿ, ಕ್ರೀಯಾಶಕ್ತಿ, ಜನಶಕ್ತಿ, ಧನಶಕ್ತಿ ಒಟ್ಟು ಸೇರಿದರೆ ಮಾತ್ರ ಸಾಧ್ಯ ಎಂದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಬಿಂದಿಯಾ ಶೆಟ್ಟಿ ಸುರತ್ಕಲ್ ಇವರ ಸಾಧನೆಯನ್ನು ಗುರುತಿಸಿ ಜ್ಯೋತಿಷಿ ಕೆ.ಸಿ. ನಾಗೇಂದ್ರ ಭಾರದ್ವಾಜ್ ಸನ್ಮಾನಿಸಿದರು. ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷರಾದ  ತಿಲಕ್ ರಾಜ್ ಕೃಷ್ಣಾಪುರ, ನೂತನವಾಗಿ ನಾಮ ನಿರ್ದೇಶಿತಗೊಂಡ ಮ ನ ಪಾ ಸದಸ್ಯ ಪ್ರಶಾಂತ್ ಮುಡಾಯಿಕೋಡಿ, ಸ್ಥಳೀಯ ಮನಪಾ ಸದಸ್ಯೆ ಲಕ್ಷ್ಮೀ ಶೇಖರ್ ದೇವಾಡಿಗ ಅವರನ್ನು ಗೌರವಾರ್ಪಣೆಗೈದು ಮಾತನಾಡಿದ ಶಾಸಕ ಡಾ ಭರತ್ ಶೆಟ್ಟಿ ವೈ ಅವರು ಮಾತನಾಡಿದರು.

ಇದೇ ಸಂದರ್ಭ ಸಾರ್ವಜನಿಕರು ಹಾಗೂ ಯುವಕ ಮಂಡಲದ ಸದಸ್ಯರಿಗೆ ಏರ್ಪಡಿಸಲಾಗಿದ್ದ  ಕ್ರೀಡಾ ಸ್ಪರ್ಧಾ ವಿಜೇತರಿಗೆ ಮಂಗಳೂರು ಎಸ್ ಇ ಝೆಡ್ ನ ಹಿರಿಯ ಮಹಾ ಪ್ರಬಂಧಕರ ಇಟಾ ಶ್ರೀನಿವಾಸುಲು ಮತ್ತು ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಬಹುಮಾನಗಳನ್ನು ವಿತರಿಸಿದರು. ದ.ಕ.ಜಿಲ್ಲಾ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಸಭಾಧ್ಯಕ್ಷತೆ ವಹಿಸಿದ್ದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಶಿರಸಿ ವೈಭವ್ ಒಕ್ಸಿ ಪ್ಲಸ್ ನ ವಿಜಯ್ ಪ್ರಶಾಂತ್ ಭಟ್, ಎಸ್.ಎಲ್. ಡೈಮಂಡ್ ಹೌಸ್ ನ ಎಂ. ರವೀಂದ್ರ ಶೇಟ್, ಯಾದವ್ ಕೋಟ್ಯಾನ್ ಪೆರ್ಮುದೆ, ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಬೊಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುವರ್ಣ ಸಂಭ್ರಮ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಮುಡಾಯಿಕೋಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿ. ಸುಧಾಕರ್ ಕಾಮತ್ ಪ್ರಸ್ತಾವನೆಗೈದು ಗೌರವಾರ್ಪಣೆ ಸ್ವೀಕರಿಸಿದವರ ಸಾಧನೆಗಳನ್ನು ವಿವರಿಸಿದರು. ಸನ್ಮಾನ ಪತ್ರಗಳನ್ನು ನರೇಂದ್ರ ಕಾಮತ್ ಮತ್ತು ಕೀರ್ತನಾ ಸನಿಲ್, ಬಹುಮಾನಿತರ ಪಟ್ಟಿಯನ್ನು ವಿನೋದ್ ಶೆಟ್ಟಿ ವಾಚಿಸಿದರು. ಕಾರ್ಯದರ್ಶಿ ರಾಕೇಶ್ ಕೋಟ್ಯಾನ್ ಧನ್ಯವಾದಗಳನಿತ್ತರು. ಪಿ ವೆಂಕಟರಮಣ ಐತಾಳ್, ನಾಗೇಶ್ ಕಾರಂತ್, ಮನಮೋಹನ್, ಶೇಖರ್ ದೇವಾಡಿಗ, ದುರ್ಗಾಪ್ರಸಾದ್ ಹೊಳ್ಳ, ಭರತ್ ರಾಜ್ ಕೃಷ್ಣಾಪುರ, ವಿಶ್ವನಾಥ್ ಬಿ ಮೂಲ್ಯ, ಸೂರಜ್ ರೈ, ಸೂರಜ್ ಅಂಚನ್, ಪ್ರಶಾಂತ್ ಆಚಾರ್ಯ, ರೋಷನ್ ಶೆಟ್ಟಿ, ತಿಲಕ್ ಕುಲಾಲ್, ಹರಿಪ್ರಸಾದ್ ಕಲ್ಲಮಾರ್, ಕಮಲಾಕ್ಷ ಕಾಳಗುಂಡಿ, ಚೇತನ್ ರೈ, ಲೀಲಾಧರ್ ಬಿ ಮೂಲ್ಯ, ಪ್ರಸಾದ್ ದೇವಾಡಿಗ, ಬಾಲಕೃಷ್ಣ ಕುಲಾಲ್, ರಿತೇಶ್ ದೇವಾಡಿಗ, ನಿರಂಜನ್ ಕುಲಾಲ್, ಮಂಜು ಆಚಾರ್ಯ, ಗಿರೀಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

ಟೈಮ್ ಆ್ಯಂಡ್ ಟೈಡ್ ಇವೆಂಟ್ ಮ್ಯಾನೇಜ್ಮೆಂಟ್ ಇವರಿಂದ ಚಿತ್ರರಂಗದ ಹಾಗೂ ನಟನಟಿಯರ ಸಮ್ಮಿಲನದೊಂದಿಗೆ  ಅತೀ ದೊಡ್ಡ ಪರಿಪೂರ್ಣ ಮನೋರಂಜನೆಯ ಸಂಗೀತ ರಸದೌತಣ ಜನಸಾಗರದಿಂದ ಮೆಚ್ಚುಗೆ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News