ಬೆಂಗಳೂರು ನಗರ ವಿವಿ ಘಟಿಕೋತ್ಸವ: 2 ಚಿನ್ನದ ಪದಕ ಗೆದ್ದ ತಾಖಿಯಾ ಖಾನಂ
Update: 2022-04-09 17:33 IST
ಬೆಂಗಳೂರು, ಎ.9: ಬೆಂಗಳೂರು ನಗರ ವಿಶ್ವವಿದ್ಯಾಲಯದ ಬಿಬಿಎ ಪದವಿ ವಿದ್ಯಾರ್ಥಿನಿ ತಾಖಿಯಾ ಖಾನಂ ಎರಡು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಜಯನಗರದ ಎಸ್‍ಎಸ್‍ಎಂಆರ್‍ವಿ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ತಾಖಿಯಾ ಖಾನಂ, ಬಿಬಿಎ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆದಿದ್ದು, ನಾಳೆ(ಸೋಮವಾರ) ನಡೆಯುವ ಬೆಂಗಳೂರು ನಗರ ವಿವಿ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತಿದೆ.
ಅದೇ ರೀತಿ, ಬಿಕಾಂ ವಿದ್ಯಾರ್ಥಿನಿ ಪೂರ್ವಾ ಎನ್.ಗಾಂಧಿ, ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ದುವ್ವುರು ಅಲೇಕ್ಯಾ, ಎಂಎಸ್ಸಿ ವಿದ್ಯಾರ್ಥಿನಿಗಳಾದ ಆನ್ ಮೇರಿ ಸೆಬಾಸ್ಟಿಯನ್, ನಿವೇದಿತಾ ಬಿ.ಎಸ್., ಎಂಎ ಫ್ರೆಂಚ್‍ನಲ್ಲಿ ಅನೀತಾ ಕರೆನ್ ಪೆರೈರಾ ಸಹ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.