ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Update: 2022-04-09 20:11 IST
ಮಂಗಳೂರು : ದ.ಕ.ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮಲ್ಲಿಕಟ್ಟೆಯ ಮಾರ್ಕೆಟ್ ನಿಂದ ಬೆಂದೂರ್ ವೆಲ್ ಸರ್ಕಲ್ ವರೆಗೆ “ಯುವ ಆಕ್ರೋಶ” ಪ್ರತಿಭಟನಾ ಜಾಥ ನಡೆಯಿತು.
ದಿನಬಳಕೆಯ ಅಗತ್ಯ ಸಾಮಗ್ರಿಗಳು, ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಸೇರಿದಂತೆ ವಿವಿಧ ಸಾಮಗ್ರಿಗಳ ಬೆಲೆ ಏರಿಕೆಯ ನಿಯಂತ್ರಣ ದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವ ಕೇಂದ್ರ, ರಾಜ್ಯ ಸರಕಾರದ ಧೋರಣೆ ಯ ವಿರುದ್ಧ ಪ್ರತಿಭಟನೆ ಭಟನೆ ಹಮ್ಮಿಕೊಂಡಿರುವುದಾಗಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಲುಕ್ಮನ್ ಬಂಟ್ವಾಳ್ ತಿಳಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸದಸ್ಯ ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಗ್ಯಾಸ್ ಸಿಲಿಂಡರ್, ಸೌದೆ ಯೊಂದಿಗೆ ಮೆರವಣಿಗೆ ನಡೆಸಿದರು. ಘಟಕದ ಉಪಾಧ್ಯಕ್ಷ ಗಿರೀಶ್ ಆಳ್ವ ವಂದಿಸಿದರು.