ಸರತ್ಕಲ್ ಸುತ್ತಮುತ್ತ ಪ್ರದೇಶದಲ್ಲಿ ಸಿಡಿಲು, ಗುಡುಗು ಸಹಿತ ಮಳೆ
Update: 2022-04-09 20:20 IST
ಸುರತ್ಕಲ್ : ಸರತ್ಕಲ್ ಸುತ್ತಮುತ್ತ ಪ್ರದೇಶದಲ್ಲಿ ಶನಿವಾರ ರಾತ್ರಿ ಸಿಡಿಲು, ಗುಡುಗು, ಸಹಿತ ಭಾರೀ ಗಾಳಿ ಮಳೆಯಾಯಿತು.
ಸುಮಾರು ಅರ್ಧಗಂಟೆಗಳ ಕಾಲ ಮಳೆ ಸುರಿಯಿತು. ಅದಕ್ಕೂ ಮುನ್ನ ಭಾರೀ ಗಾಳಿ ಬೀಸಲಾರಂಬಿಸಿತ್ತು. ಬಳಿಕ ಗಾಳಿಯೊಂದಿಗೆ ಮಿಂಚು, ಗುಡುಗು ಆರಂಭ ಗೊಂಡು ಅರ್ಧ ಗಂಟೆಗಳ ಕಾಲ ಭಾರೀ ಮಳೆಯಾಯಿತು.
ಗಾಳಿ ಮಳೆಯು ಮನಪಾ ವ್ಯಾಪ್ತಿಯ ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಮುಕ್ಕ, ಬೈಕಂಪಾಡಿ, ಜೋಕಟ್ಟೆ ಸೇರಿದಂತೆ ಸುತ್ತ ಮುತ್ತ ಸುರಿದಿದೆ ಎಂದು ತಿಳಿದು ಬಂದಿದೆ.
ಗಾಳಿ ಮಳೆಯಿಂದ ಯಾವುದೇ ಪ್ರಾಣ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.