×
Ad

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನಟ ಯಶ್ ಭೇಟಿ

Update: 2022-04-10 12:40 IST

ಸುಬ್ರಹ್ಮಣ್ಯ, ಎ.10: ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ರವಿವಾರ ಭೇಟಿ ನೀಡಿದರು.

    ಶೀಘ್ರ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಕೆಜಿಎಫ್-2 ಚಿತ್ರತಂಡದ ಜತೆಯಲ್ಲಿ ಯಶ್ ಕ್ಷೇತ್ರಕ್ಕೆ ಆಗಮಿಸಿದ್ದರು ನೀಡಿದರು ಎಂದು ತಿಳಿದುಬಂದಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಂ ಸುಳ್ಳಿ  ಚಿತ್ರತಂಡವನ್ನು ಸ್ವಾಗತಿಸಿದರು. ಯಶ್ ಹಾಗೂ ಸಂಗಡಿಗರು ಕ್ಷೇತ್ರದಲ್ಲಿ ಶ್ರೀ ದೇವರ ದರ್ಶನ ಪಡೆದು ಪ್ರಸಾರ ಸ್ವೀಕರಿಸಿದರು.

 ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶೋಭಾ ಗಿರಿಧರ್, ಎಇಒ ಪುಷ್ಪಲತಾ, ಶಿಷ್ಟಾಚಾರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯಶ್ ರನ್ನು ನೋಡಿದ ಅಭಿಮಾನಿಗಳು ಪೋಟೊ ತೆಗೆಯಲು ಮುಗಿಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News