×
Ad

ಬೆಂಗಳೂರು: ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಜೊತೆ ಯುವಕನ ಮಾರಾಮಾರಿ

Update: 2022-04-10 21:15 IST

ಬೆಂಗಳೂರು, ಎ.10: ಕ್ಷುಲ್ಲಕ ಕಾರಣಕ್ಕೆ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಹಾಗೂ   ಯುವಕನೋರ್ವನ ಮಧ್ಯೆ ಮಾರಾಮರಿ ನಡೆದಿರುವ ಘಟನೆ ನಡೆದಿದೆ.

ನಗರದ ಪುಟ್ಟೇನಹಳ್ಳಿ ಬಳಿ ಈ ಘಟನೆ ನಡೆದಿದ್ದು,  ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಹಾಗೂ ಭರತ್ ಶೆಟ್ಟಿ ಎಂಬ ಯುವಕ ಪರಸ್ಪರ ಕೈ ಕೈ ಮಿಲಾಯಿಸುವ   ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯು.ಬಿ.ವೆಂಕಟೇಶ್, ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಹೊರವಲಯಕ್ಕೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಪುಟ್ಟೇನಹಳ್ಳಿ ಬಳಿ ವಾಹನಗಳು ಸಾಲು ಸಾಲಾಗಿ ನಿಂತಿದ್ದವು. ಇದನ್ನು ಕಂಡು ಕೆಳಗೆ ತೆರಳಿ ನೋಡಿದಾಗ ಯುವಕನೋರ್ವ ಇತರೆ ವಾಹನ ಸವಾರರೊಂದಿಗೆ ಜಗಳವಾಡುತ್ತಿದ್ದ ಎಂದರು.

ಆನಂತರ, ಜಗಳ ಮಾಡಬೇಡಿ ಎಂದು ತಿಳಿ ಹೇಳಿದರೂ, ಆತ ನಿಂದಿಸಲು ಮುಂದಾದ, ಆಗ ಸುಮ್ಮನಿರುವಂತೆ ಹೇಳಿದೆ. ಬಳಿಕ ಆತ ನನ್ನ ಮೇಲೆ ಮುಗಿಬಿದ್ದು, ಹಲ್ಲೆ ನಡೆಸಿದ್ದಾನೆ. ಸದ್ಯ ಆತ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ತಪ್ಪಾಯಿತು ಎಂದು ಅರ್ಜಿ ಬರೆದಿದ್ದು, ಈ ವಿಷಯ ಬಗೆಹರಿದಿದೆ ಎಂದು ವಿವರಿಸಿದರು. ಈ ಕುರಿತು ಯುವಕ ಭಾರತ್ ಶೆಟ್ಟಿ ಪ್ರತಿಕ್ರಿಯಿಸಿ, ಯು.ಬಿ.ವೆಂಕಟೇಶ್ ಯಾರೆಂದು ತಿಳಿದಿಲ್ಲ. ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದು, ನನಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ನುಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News