ಸುರತ್ಕಲ್; ಸಾಲಭಾದೆ: ಯುವಕ ಆತ್ಮಹತ್ಯೆ
Update: 2022-04-11 18:18 IST
ಸುರತ್ಕಲ್ : ಸಹೋದರಿಯರಿಬ್ಬರು ಸಮುದ್ರಪಾಲದ ಪ್ರಕರಣದ ಬೆನ್ನಲ್ಲೇ ಎನ್ಐಟಿಕೆ ಬೇಚ್ ಗೆ ಸಮೀಪದ ಮಲ್ಲಮ್ಮಾರ್ ಬೀಚಿನಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಸೋಮವಾರ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸುರತ್ಕಲ್ ಆಶ್ರಯ ಕಾಲನಿ 3ನೇ ಬ್ಲಾಕ್ ನಿವಾಸಿ ಕರ್ನಲ್ ಡಿಸೋಜಾ ಅವರ ಪುತ್ರ ಕ್ಯಾಂಡ್ರಿಕ್ ಲೋರೆನ್ಸ್ ಡಿಸೋಜಾ ಎಂದು ತಿಳಿದು ಬಂದಿದೆ. ಈತ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
"ಆತ್ಮಹತ್ಯೆಗೆ ನಾನೇ ಕಾರಣ. ಸಾಲ ಹೆಚ್ಚಾಗಿರುವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.