ಸುರತ್ಕಲ್ : ಮಹಿಳೆ ನಾಪತ್ತೆ
ಸುರತ್ಕಲ್, ಎ.11: ತಾಯಿ ಮನೆಗೆ ಹೋಗುವುದಾಗಿ ಹೇಳಿ ಹೋದ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇಳಾಯರು ನಿವಾಸಿ ರಮೇಶ್ ಕೋಟ್ಯಾನ್ ಎಂಬವತ ಪತ್ನಿ ಪ್ರೇಮಾ (52) ನಾಪತ್ತೆ ಯಾದವರು ಎಂದು ತಿಳಿದುಬಂದಿದೆ.
ಎ.2ರಂದು ಮುಲ್ಕಿ ಪಂಜಿನಡ್ಕದ ತಾಯಿ ಮನೆಗೆ ಹೋಗುವುದಾಗಿ ತೆರಳಿರುವ ಪ್ರೇಮಾ ಅವರು, ತಾಯಿಯ ಮನೆಗೂ ಹೋಗದೆ, ಗಂಡನ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಎ.5ರಂದು ರಮೇಶ್ ಅವರ ಮನೆಯಲ್ಲಿ ದೇವರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರೇಮಾ ಅವರ ಸಹೋದರಿ ಮನೆಗೆ ಬಾರದಿರುವ ಬಗ್ಗೆ ಮಾಹಿತಿ ನೀಡಿದ ಬಳಿಕ ಅವರು ನಾಪತ್ತೆಯಾಗಿರುವುದು ಬೆಳಕಿದೆ ಬಂದಿದೆ.
ಅಲ್ಪ ಪ್ರಮಾಣದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಅವರಿಗೆ ಕಿವಿ ಕೇಳಿಸುವುದಿಲ್ಲ ಎಂದು ತಿಳಿದು ಬಂದಿದೆ. ಪ್ರೇಮಾ ಅವರು ಈ ಮೊದಲು ಎರಡು ಬಾರಿ ಇದೇ ರೀತಿ ನಾಪತ್ತೆಯಾಗಿದ್ದರು. ಬಳಿಕ ಒಂದು ವಾರದ ಬಳಿಕ ಮನೆಗೆ ಹಿಂದಿರುಗುತ್ತಿದ್ದರು ಎಂದು ಪತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಚಹರೆ: 5.2 ಎತ್ತರ, ಗೋದಿ ಮೈಬಣ್ಣ, ಕಪ್ಪು ತಲೆಕೂದಲು, ದುಂಡು ಮುಖ ಹೊಂದಿದ್ದು, ತುಳು, ಕನ್ನಡ ಮಾತನಾಡುತ್ತಾರೆ. ನಾಪತ್ತೆಯಾಗುವ ಸಮಯ ಚೂಡಿದಾರ ಧರಸಿದ್ದು, ಕಿವಿಗೆ ಶ್ರವಣದೋಷದ ಯಂತ್ರ ಧರಿಸಿದ್ದಾರೆ.