ವಾರ್ತಾ ಇಲಾಖೆ ಏಳು ಮಂದಿಗೆ ಮುಂಭಡ್ತಿ

Update: 2022-04-12 17:11 GMT

ಬೆಂಗಳೂರು, ಎ. 12: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ನಿರ್ದೇಶಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವೇತನ ಶ್ರೇಣಿಯನ್ನು 67,550 ರೂ.ಗಳಿಂದ 1,04,600ರೂ.ಗಳಿಗೆ ಹೆಚ್ಚಳ ಮಾಡಿ ಗ್ರೂಪ್ `ಎ' ವೃಂದದ ಹಿರಿಯ ಶ್ರೇಣಿಯ ಉಪನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಿ ಆದೇಶಿಸಲಾಗಿದೆ.

ಮುಂಭಡ್ತಿ ಹೊಂದಿದ ಅಧಿಕಾರಿಗಳ ಹೆಸರು ಮತ್ತು ಹುದ್ದೆ: ಮಂಜುನಾಥ್ ಡೊಳ್ಳಿನ-ಧಾರವಾಡ, ಪಲ್ಲವಿ ಹೊನ್ನಾಪುರ-ಕೋಲಾರ, ಸಿದ್ದೇಶ್ವರಪ್ಪ ಜಿ.ಬಿ.-ಕಲಬುರಗಿ, ಸಿ.ಆರ್.ನವೀನ್-ರಾಮನಗರ, ಗುರುನಾಥ ಕಡಬೂರ-ಬೆಳಗಾವಿ, ಅಶೋಕ್ ಕುಮಾರ್ ಡಿ.-ದಾವಣಗೆರೆ ಹಾಗೂ ರಾಮಲಿಂಗಪ್ಪ-ಬಳ್ಳಾರಿ ಜಿಲ್ಲೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News