×
Ad

ಗಂಜಿಮಠ : ನಿಯಂತ್ರಣ ತಪ್ಪಿದ ಬಸ್‌ ಪಲ್ಟಿ; ನಾಲ್ಕು ಮಂದಿಗೆ ಗಾಯ

Update: 2022-04-13 23:12 IST

ಬಜ್ಪೆ : ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠ ಪೆಟ್ರೋಲ್ ಪಂಪ್ ಬಳಿ ಬಸ್ಸೊಂದು ಪಲ್ಟಿಯಾದ ಪರಿಣಾಮ ನಾಲ್ಕು ಮಂದಿ ಗಾಯಗೊಂಡ ಘಟನೆ ಇಂದು ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ.

ಶೃಂಗೇರಿಯಿಂದ ಮಂಗಳೂರಿಗೆ ಬರುತ್ತಿದ್ದ ನಿಶ್ಮಿತಾ ಕಂಪನಿಯ ಬಸ್‌ ನಿಯಂತ್ರಣ ತಪ್ಪಿ ರಸ್ತೆಯ ಬದಿ ಮಗುಚಿ ಬಿದ್ದಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಬಜ್ಪೆ ಪೊಲೀಸ್ ಸಿಬ್ಬಂದಿ‌ ಸಂಚಾರ ಸುಗಮಗೊಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿರುವುದಾಗಿ ಮಾಹಿತಿ ನೀಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News