×
Ad

ಇನ್‍ಸ್ಪೆಕ್ಟರ್ ಬ್ಯಾಂಕ್ ಖಾತೆಯಿಂದ 3.63 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2022-04-14 20:56 IST

ಬೆಂಗಳೂರು, ಎ.14: ಪೊಲೀಸ್ ಇನ್‍ಸ್ಪೆಕ್ಟರ್ ಒಬ್ಬರಿಗೆ ಬ್ಯಾಂಕ್ ಖಾತೆಯ ಕೆವೈಸಿ ಹಾಗೂ ಪಾನ್ ನಂಬರ್ ಅಪ್‍ಡೇಟ್ ಮಾಡುವ ನೆಪದಲ್ಲಿ ಸೈಬರ್ ಖದೀಮನೊಬ್ಬ 3.63 ಲಕ್ಷ ವಂಚನೆ ನಡೆಸಿರುವ ಸಂಬಂಧ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ಅಪರಾಧ ದಾಖಲೆಗಳ ವಿಭಾಗ(ಎನ್‍ಸಿಆರ್‍ಬಿ )ದ ಇನ್‍ಸ್ಪೆಕ್ಟರ್ ನಾಗಭೂಷಣ್ ಅವರಿಗೆ ಬ್ಯಾಂಕ್ ಖಾತೆಯ ಕೆವೈಸಿ ಹಾಗೂ ಪಾನ್ ನಂಬರ್ ಅಪ್‍ಡೇಟ್ ಮಾಡುವ ನೆಪದಲ್ಲಿ ವಂಚನೆ ನಡೆಸಲಾಗಿದೆ.

ಪಾನ್ ನಂಬರ್ ಹಾಗೂ ಕೆವೈಸಿ ಅಪ್‍ಡೇಟ್ ಮಾಡುವುದಾಗಿ ಸಂದೇಶವನ್ನು ಖದೀಮ ಕಳುಹಿಸಿದ್ದು ಅದನ್ನು ನಂಬಿ ನಾಗಭೂಷಣ್ ಪಾನ್ ನಂಬರ್, ಬ್ಯಾಂಕ್ ಖಾತೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಕ್ಕ ಕೂಡಲೇ ನಾಗಭೂಷಣ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 3.63 ಲಕ್ಷವನ್ನು ತೆಗೆದುಕೊಂಡಿದ್ದಾನೆ. ಕಳೆದ ಮಾರ್ಚ್ 21ರಂದು ನಡೆದ ವಂಚನೆ ಸಂಬಂಧ ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಖದೀಮನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News