ಬೆಂಗಳೂರು ನಗರದಲ್ಲಿ ಮತ್ತೆ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

Update: 2022-04-14 17:32 GMT

ಬೆಂಗಳೂರು, ಎ.14: ಗುರುವಾರವೂ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಸಂಜೆ 7.30ರ ಸುಮಾರಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿದರೆ, ಕೆಲವೆಡೆ ಸ್ವಲ್ಪ ಸುರಿದು ಮಳೆ ಮಾಯವಾಗಿದೆ. ಬುಧವಾರ ಸಂಜೆ ಸಹ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು, 12 ಮರಗಳು ಧರೆಗುರುಳಿದ್ದವು. 

ತಕ್ಷಣಕ್ಕೆ ಸುರಿದ ಬಿರುಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಕೆಲವೆಡೆ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ತೊಂದರೆ ಉಂಟಾಯಿತು. ಅಲ್ಲದೆ, ತಾಪಮಾನ ಏರಿಕೆ ಹಿನ್ನೆಲೆ ಬೇಸತ್ತಿದ್ದ ಜನರು ಬೆಂಗಳೂರಿನಲ್ಲಿ ಮಳೆ ಕಂಡು ಸಂತಸಗೊಂಡಿದ್ದಾರೆ.  

ಬೆಂಗಳೂರಿನ ದಕ್ಷಿಣ, ಉತ್ತರ, ಪೂರ್ವ ಭಾಗದಲ್ಲಿ ಗುರುವಾರ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ನಗರದಲ್ಲಿ ಶುಕ್ರವಾರ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. 

ರಾಜಾಜಿನಗರ, ಮೆಜೆಸ್ಟಿಕ್, ಜಯನಗರ, ಹನುಂತನಗರ, ಮೈಸೂರು ರಸ್ತೆ, ವಿದ್ಯಾಪೀಠ, ಜೆ. ಪಿ. ನಗರ, ಶಾಂತಿ ನಗರ, ಕೋರಮಂಗಲ, ಆರ್. ಆರ್. ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗುತ್ತಿದೆ. ಹಲಸೂರು, ಮಾರತ್ತಹಳ್ಳಿ, ಮಡಿವಾಳ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ರಾಜಾಜಿನಗರ, ಯಶವಂತಪುರ, ಜೆ. ಪಿ. ಪಾರ್ಕ್, ವಿದ್ಯಾರಣ್ಯಪುರದಲ್ಲಿಯೂ ಮಳೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News