ಈಶ್ವರಪ್ಪರ ರಾಜೀನಾಮೆಯನ್ನು ರಾತ್ರಿಯೇ ಅಂಗೀಕರಿಸಿದ ರಾಜ್ಯಪಾಲರು
Update: 2022-04-16 10:13 IST
ಬೆಂಗಳೂರು, ಎ.16: ಗುತ್ತಿಗೆದಾರ ಸಂತೋಷ್ ಪಾಟೀಲ್ 'ಆತ್ಮಹತ್ಯೆ'ಯ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಶುಕ್ರವಾರ ರಾತ್ರೋರಾತ್ರಿಯೇ ಅಂಗೀಕರಿಸಲಾಗಿದೆ.
ಶುಕ್ರವಾರ ರಾತ್ರಿ ತನ್ನ ಬೆಂಬಲಿಗರೊಂದಿಗೆ ಮುಖ್ಯಮಂತ್ರಿಯನ್ನು ಅವರ ನಿವಾಸದಲ್ಲಿ ಭೇಟಿಯಾದ ಈಶ್ವರಪ್ಪ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಮಧ್ಯ ಪ್ರದೇಶದ ಇಂಧೋರ್ ನಲ್ಲಿದ್ದ ರಾಜ್ಯಪಾಲರು ಇ-ಮೇಲ್ ಮೂಲಕ ಈಶ್ವರಪ್ಪರ ರಾಜೀನಾಮೆ ಪತ್ರವನ್ನು ತರಿಸಿಕೊಂಡಿದ್ದು, ರಾತ್ರಿ 12 ಸುಮಾರಿಗೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.